ಬಡ್ಡಿ ಹಣಕ್ಕಾಗಿ ಯುವಕನ ಮೇಲೆ ಬಿತ್ತು ಮಚ್ಚಿನೇಟು!
Powercity news : ಹುಬ್ಬಳ್ಳಿ, ಸಮಯಕ್ಕೆ ಸರಿಯಾಗಿ ಬಾಕಿ ಬಡ್ಡಿ ಹಣ ಕೊಡಲಿಲ್ಲ ವೆಂದು ಯುವಕನ ಮೇಲೆ ನಾಲ್ವರ ಗುಂಪೊಂದು ಮಾರಕಾಸ್ತ್ರಗಳಿಂದ ಇರಿದು ಹಲ್ಲೆ ಗೈದಿರುವ ಹಿನ್ನೆಲೆ ಯುವಕ ಸಾವು ಬದುಕಿನ ನಡುವೆ ಹೊರಾಡುತ್ತಿರುವ ಘಟನೆ ಹಳೆ ಹುಬ್ಬಳ್ಳಿಯ ನೇಕಾರನಗರದ ತಿಮ್ಮಸಾಗರ ರಸ್ತೆಯ ಛವ್ಹಾಣ ಪ್ಲಾಟ್ ನಲ್ಲಿ ರಾತ್ರಿ 8:20ರ ಸುಮಾರಿಗೆ ನಡೆದಿದೆ.
ಗಾಯಾಳುವನ್ನು ಹೂವಿನ ವ್ಯಾಪಾರಿ ಶೇಖರ ಬಾರಕೇರ(35) ಎಂದು ಗುರುತಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಾ,ಸು,ವಿಭಾಗದ ಡಿಸಿಪಿ ಹಾಗೂ ಎಸಿಪಿ ಆರ್ ಕೆ ಪಾಟೀಲ್ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಯಾಳುವಿನ ಪತ್ನಿ ನೀಡಿದ ಮಾಹಿತಿಯ ಮೇರೆಗೆ ಬಾಣತಿಕಟ್ಟೆ ನಿವಾಸಿ ಕುಮಾರ ಹಾಗೂ ಆತನೊಂದಿಗೆ ಬಂದ ಕೆಲವರು ಮನ ಬಂದಂತೆ ಕುತ್ತಿಗೆ ಹಾಗೂ ಎದೆಗೆ ಹರಿತವಾದ ಆಯುಧಗಳಿಂದ ತನ್ನ ಪತಿಯಾದ ಶೇಖರ ಬಾರಕೇರ ಮೇಲೆ ದಾಳಿ ನಡೆಸಿದ್ದಾಗಿ ಹಳೆಹುಬ್ಬಳ್ಳಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇನ್ನೂ ಕಿಮ್ಸ್ ಗೆ ಭೇಟಿ ನೀಡಿ ಗಾಯಳುವಿನ ಕುಟುಂಬದ ಮೂಲಗಳಿಂದ ಘಟನೆಯ ಕುರಿತು ಮಾಹಿತಿ ಪಡೆದಿರುವ ಹಳೆ ಹುಬ್ಬಳ್ಳಿಯ ಪೊಲಿಸ್ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಬಂಧನಕ್ಕೆ ಜಾಲಬಿಸಿದ್ದಾರೆ.