Next MLA ತವನಪ್ಪ ಅಷ್ಟಗಿ ಆಗಬೇಕೆಂದು ಭಕ್ತನ ವಿಶೇಷ ಹರಕೆ
ಧಾರವಾಡ
ಧಾರವಾಡ ತಾಲೂಕಿನ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಹಿರಿಯ ನಾಯಕ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನ್ನಪ್ಪ ಅಷ್ಟಗಿ ಅವರ ಹವಾ ಜೋರಾಗಿದೆ.
ಕ್ಷೇತ್ರದಲ್ಲಿ ಇವರ ಹೆಸರು ಎಷ್ಟರ ಮಟ್ಟಿಗೆ ಓಡುತ್ತಿದೆ ಎಂದ್ರೆ, ಗ್ರಾಮೀಣ ಕ್ಷೇತ್ರಕ್ಕೆ ಈ ಬಾರಿಇವರು ಎಂಎಲ್ಎ ಆಗಲಿ ಎನ್ನುವಷ್ಠರ ಮಟ್ಟಿಗೆ ಇದೆ.
ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ನಡೆದ ಧಾರವಾಡ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಗರಗದ ಶ್ರೀ ಗುರು ಮಡಿವಾಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣಿನಲ್ಲಿ next mla ತವನ್ನಪ್ಪಾ ಅಷ್ಟಗಿ ಎಂದು ಬರೆದು ಎಸೆದಿದ್ದಾರೆ.
ಹೀಗಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜೈನ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿರುವ ಅಷ್ಟಗಿ ಅವರು ಈಬಾರಿ ಚುನಾವಣೆಗೆ ನಿಲ್ಲುವಂತೆ ಅಭಿಮಾನಿಗಳು ಹಾಗೂ ಹಿತೈಶಿಗಳು ಹಾರೈಸುತ್ತಿದ್ದಾರೆ.
ಇದಕ್ಕೆ ಧಾರವಾಡ ಜಿಲ್ಲೆಯ ಮಟ್ಟಿಗೆ ಪಕ್ಷದ ಹೈಕಮಾಂಡ್ ಆಗಿರುವ ಜಿಲ್ಲೆಯ ಹಿರಿಯ ನಾಯಕರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಯಾವ ರೀತಿಯಲ್ಲಿ ಅಷ್ಟಗಿ ಅವರಿಗೆ ಜವಾಬ್ದಾರಿ ಕೊಡ್ತಾರೆ ಎನ್ನುವುದು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚರ್ಚೆ ವಿಷಯವಾಗಿದೆ.