ಸ್ಥಳೀಯ ಸುದ್ದಿ
ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಿರಿಯ ಮುಖಂಡ ಹೃದಯಾಘಾತದಿಂದ ನಿಧನ
ಧಾರವಾಡ
ಧಾರವಾಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
64 ವರ್ಷದ ಶಿವಾನಂದ ಅಂಬಡಗಟ್ಟಿ ಅವರಿಗೆ ಇಬ್ಬರು ಗಂಡು ಮಕ್ಕಳು
ಒಬ್ಬ ಹೆಣ್ಣು ಮಗಳು ಸೇರಿದಂತೆ ಮೊಮ್ಮಕಳು ಹಾಗೂ ಅಪಾರ ಬಂಧುಬಳಗವಿದೆ.
1989 ರಿಂದ ರಾಜಕಾರಣದಲ್ಲಿ ಇದ್ದ ಇವರು,
ಲೊಹೀತ್ಬನಾಯ್ಕರ್ ವಿರುದ್ಧ ಪಕ್ಷೇತರವಾಗಿ ಆಯ್ಕೆಯಾಗಿ, ಎಸ.ಎಂ ಕೃಷ್ಣಾ ಸರ್ಕಾರದಲ್ಲಿ ಶಾಸಕರಾಗಿದ್ದರು.
ನಂತರ ಕಾಂಗ್ರೆಸ್ ಪಕ್ಷದ ಜೊತೆಗೆ ಸೇರಿ ಜಿಲ್ಲೆಯಲ್ಲಿ ಕೈ ಪಕ್ಷ ಬಲಪಡಿಸಲು ಶ್ರಮಿಸಿದವರು.
ಇವರು ಮಾಜಿ ಶಾಸಕ ಶ್ರೀಕಾಂತ ಅಂಬಡಗಟ್ಟಿ ಅವರ ಸಹೋದರನೂ ಹೌದು.
ಶಿವಾನಂದ ಅಂಬಡಗಟ್ಟಿ ಅವ ಅಗಲಿಕೆಯಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕನನ್ನು ಕಳೆದುಕೊಂಡಂತೆ ಆಗಿದ್ದು, ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ಕೊಡಲೆಂದು ಪಕ್ಷದ ಹಿರಿಯ ನಾಯಕರು ಮುಖಂಡರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಮೃತರ ಅಂತ್ಯಕ್ರೀಯೆ ಅಳ್ಳಾವರದ ರುದ್ರ ಭೂಮಿಯಲ್ಲಿ ನಡೆಯಲಿದೆ.