ಸ್ಥಳೀಯ ಸುದ್ದಿ
ಗರಗ ಜಾತ್ರಾ ಮಹೋತ್ಸವದಲ್ಲಿ ಕಾಂಗ್ರೆಸ್ ಮುಖಂಡೆ ಶಿವಲೀಲಾ ಕುಲಕರ್ಣಿ ಭಾಗಿ
ಧಾರವಾಡ
ಐತಿಹಾಸಿಕ ಗರಗ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರ ಪತ್ನಿ ಕಾಂಗ್ರೆಸ್ ಮುಖಂಡೆ ಶಿವಲೀಲಾ ಕುಲಕರ್ಣಿ ಭಾಗಿಯಾದ್ರು.
ದೇವಸ್ಥಾನಕ್ಕೆ ತೆರಳಿ ಗದ್ದುಗೆ ದರ್ಶನ ಪಡೆದ ಶಿವಲೀಲಾ ಕುಲಕರ್ಣಿ ಅವರು ದಾಸೋಹ ಕೇಂದ್ರಕ್ಕೂ ಭೇಟಿ ನೀಡಿದ್ರು.
ಸ್ವಾಮೀಜಿಗಳ ಆರೋಗ್ಯ ವಿಚಾರಿಸಿ ಮಠದಲ್ಲಿ ಸಾಮಾನ್ಯ ಭಕ್ತಳಾಗಿ ಭಕ್ತರೊಂದಿಗೆ ಕಾಲ ಕಳೆದ್ರು.
ಇದೇ ಸಂದರ್ಭದಲ್ಲಿ ಶಿವಲೀಲಾ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.