ಭಾಜಪಾದ ಜನಪರ ಯೋಜನೆ ಮನೆ ಮನೆಗೆತಲುಪಿಸುತ್ತಿರುವ ಮೇಯರ್
ಧಾರವಾಡ
ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪದ ಅಭಿಯಾನದ ಮಹಾಸಂಪರ್ಕದ ಅಂಗವಾಗಿ ಇಂದು ಕಮಲಾಪುರದ ಬಾಳಗಿ ಓಣಿಯ, ಹಿರೇಮಠ ಓಣಿ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಪಾದಯಾತ್ರೆ ನಡೆಸಿದ್ರು.
ಪಾದಯಾತ್ರೆ ಮೂಲಕ ಎಲ್ಲ ಬಿಜೆಪಿ ಪದಾಧಿಕಾರಿಗಳು, ಬಿಜೆಪಿ ಬೂತಮಟ್ಟದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳ ಹಾಗೂ ಸಾಧನೆಗಳ ಬಗ್ಗೆ ವಿವರಣೆಯುಳ್ಳ ಕರಪತ್ರಗಳನ್ನು ವಿತರಣೆ ಮಾಡಿದ್ರು.
ಬಿಜೆಪಿಯೇ ಭರವಸೆ ಎಂಬ ಬರವಣಿಗೆಯುಳ್ಳ ಭಿತ್ತಿಪತ್ರವನ್ನು ಮನೆಗಳ ಮೇಲೆ ಅಂಟಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುನೀಲ ಮೋರೆ ರವರು, ಶ್ರೀಮತಿ ರಾಜೇಶ್ವರಿ ಅಳಗವಾಡಿ ರವರು, ಸೋಮು ಉಡಿಕೇರಿ ರವರು, ಬಸವಣ್ಣೆಪ್ಪ ಬಾಳಗಿ ರವರು, ಅಶೋಕ ಶೆಟ್ಟರ ರವರು, ಶಂಕರ ಪರೀಟ ರವರು, ಶೇಖರ ಕವಳಿ ರವರು, ಸಿದ್ದು ಕಲ್ಯಾಣಶೆಟ್ಟಿ ರವರು, ಈರಯ್ಯ ರವರು, ಮಂಜುನಾಥ ಹೊಂಗಲ ಸೇರಿದಂತೆ ಸಂತೋಷ ಬಡಿಗೇರ ಹಾಗೂ ಇನ್ನಿತರರು ಇದ್ದರು.