ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಸಮಾಜಕ್ಕೆ ಸಿದ್ಧರಾಮೇಶ್ವರರ ಕೊಡುಗೆ ಅಪಾರ: ಜಗದೀಶ ಶೆಟ್ಟರ್!

ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ
-ಜಗದೀಶ್ ಶೆಟ್ಟರ್

ಹುಬ್ಬಳ್ಳಿ ಫೆ.2

ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ. ಭೋವಿ ಸಮಾಜ ಆರ್ಥಿಕ ಮತ್ತು ಸಾಮಾಜಿಕವಾಗಿ ಒಗ್ಗಟ್ಟು ತೋರಿಸಬೇಕಿದೆ. ಸಿದ್ದರಾಮೇಶ್ವರರ ಕೊಡುಗೆ ಸ್ಮರಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.

ಇಂದು ತಾಲೂಕು ಆಡಳಿತ ಸೌಧದ ತಹಸೀಲ್ದಾರ ಸಭಾಂಗಣದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವತಿಯಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮೇಶ್ವರ ಜಯಂತಿ ಸರಕಾರದ ಕಾರ್ಯಕ್ರಮವನ್ನಾಗಿ ಮಾಡಿದ್ದು ಒಳ್ಳೆಯ ಸಂಗತಿ. ಇಂದಿನ ಯುವ ಸಮುದಾಯ ಮೂಲ ಇತಿಹಾಸ ಅರಿಯಬೇಕಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಯುವ ಸಮುದಾಯದ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಸಮಾಜದ ಮೂಲ ವೃತ್ತಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗದೇ ವಿವಿಧ ಉದ್ಯೋಗಗಳಲ್ಲಿ ತೊಡಗಬೇಕು. ಸಮಾಜದ ಉನ್ನತಿಗಾಗಿ ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ
ಡಿ. ಹನುಮಂತಪ್ಪ ಮಾತನಾಡಿ, ಸಿದ್ದರಾಮೇಶ್ವರರ 850 ನೇ ಜಯಂತಿ ಆಚರಿಸುತ್ತಿರುವುದು ಸಂತಸದ ವಿಷಯ. ಸಿದ್ದರಾಮೇಶ್ವರು ಲೋಕ ಕಲ್ಯಾಣಕ್ಕಾಗಿ ಹಲವಾರು ಕೆರೆ -ಕಟ್ಟೆ, ದೆವಸ್ಥಾನಗಳನ್ನು ನಿರ್ಮಿಸಿದರು. ಸಮಾಜದಲ್ಲಿನ ಮೂಢನಂಬಿಕೆಗಳನ್ನು ತೊಡೆದು ಹಾಕಿ ವ್ಯವಸ್ಥಿತ ಸಮಾಜವನ್ನು ಕಟ್ಟಿದರು. ಸಿದ್ದರಾಮೇಶ್ವರರು ಒಬ್ಬ ಮಹಾನ ಜ್ಞಾನಿಯಾಗಿ, ಕಾಯಕಯೋಗಿಯಾಗಿ ಹಲವಾರು ಪವಾಡಗಳನ್ನು ಮಾಡಿದರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿದರು. ಭೋವಿ ಸಮಾಜದ ಮೂಲ ಕಾಯಕ ಮಾಡುವರಿಗೆ ನ್ಯಾಯ ಸಿಗಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಚೇತನ ಹಿರೇಕೆರೂರು ಹಾಗೂ ಮಹಾದೇವ ನರಗುಂದ ಅವರನ್ನು ಸನ್ಮಾನಿಸಲಾಯಿತು.

ಚೇತನ ಹಿರೇಕೆರೂರ:ಮಹಾದೇವ ನರಗುಂದ ಗೆ ಸನ್ಮಾನ

ಅಪರ ತಹಸೀಲ್ದಾರರಾದ ಶಿವಾನಂದ ಹೆಬ್ಬಳ್ಳಿ, ಜಿ.ವಿ ಪಾಟೀಲ್, ಹುಬ್ಬಳ್ಳಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಸಾವ್ಕಾರ,
ಮಹಾದೇವ್ ನರಗುಂದ, ಶಿವು ಹಿರೇಕೆರೂರ, ಲಕ್ಮಣ ಚಿಕ್ಕೋಡಿ, ದಯಾನಂದ ಸಾಗರ, ಸುರೇಶ ಬಂಕಾಪುರ, ಸಿದ್ದಪ್ಪ ಒಡೆಯರ, ಗುರುನಾಥ ಅಮರಾವತಿ, ಭೋವಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಕೃಷ್ಣಾಪೂರ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಪೂಜಾ ನವಲೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ನಿಟ್ಟೂರು ನಿರೂಪಿಸಿ, ವಂದಿಸಿದರು.


Related Articles

Leave a Reply

Your email address will not be published. Required fields are marked *