ಸ್ಥಳೀಯ ಸುದ್ದಿ
ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆ ಗಾಳಿ ಪಟ ಉತ್ಸವ
ಧಾರವಾಡ
ಧಾರವಾಡದ ಸಾಫಲ್ಯ ಪ್ರತಿಷ್ಠಾನದ ಸಂಸ್ಕೃತಿ ಶಿಶುಮಂದಿರದಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿಯ ಪ್ರಯುಕ್ತ ಮಕ್ಕಳಿಂದ ಗಾಳಿಪಟ ಉತ್ಸವ ನಡೆಯಿತು.
ಶಾಲೆ ಮುಖ್ಯಸ್ಥರಾದ ಮೃಣಾಲ ಜೋಶಿ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಮಕ್ಕಳಿಂದಲೇ ಗಾಳಿಪಟ ತಯಾರಿಸಿ, ಅದನ್ನು ಹಾರಿಸುವುದನ್ನು ಕಲಿಸುವ ಮೂಲಕ ಸಂಸ್ಕೃತಿ ಶಾಲೆ ಸಂಕ್ರಾಂತಿ ಗಾಳಿಪಟ ಉತ್ಸವವನ್ನು ಆಚರಿಸಲಾಯಿತು.
ಮಕ್ಕಳು ಶಿಕ್ಷಕಿಯರೊಂದಿಗೆ ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ಈ ಉತ್ಸವದಲ್ಲಿ ಪಾಲ್ಗೊಂಡರು.