ಲಕಮಾಪೂರ ಗ್ರಾಮದಲ್ಲಿ 2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಧಾರವಾಡ
ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಅಂದಾಜು ಮೊತ್ತ 2 ಕೋಟಿ ರೂ ಅನುದಾನದಲ್ಲಿ ಗ್ರಾಮದ ಸ್ಥಳೀಯ ಹಳ್ಳಕ್ಕೆ (BCB) ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಂದಾಜು ಮೊತ್ತ 30 ಲಕ್ಷ ರೂ ಅನುದಾನದಲ್ಲಿ ಲಕಮಾಪೂರ-ಮುಳಮುತ್ತಲ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಅವರು ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿ ಅತಿವೃಷ್ಟಿಯಿಂದ ರಸ್ತೆ ಮೇಲೆ ನೀರು ಬಂದು ರಸ್ತೆ ಸಂಚಾರ ಸ್ಥಗಿತವಾಗುತಿತ್ತು ಈ ಬಿಸಿಬಿ ನಿರ್ಮಾಣದಿಂದ ರಸ್ತೆ ಸಂಪರ್ಕ ಸರಳ ಕಲ್ಪಿಸಲಾಗುವುದು ಮತ್ತು ಸ್ಥಳೀಯ ರೈತರ ನೀರಾವರಿಗೆ ಸಹಾಯವಾಗುವುದು ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಮಹೇಶ ಎಲಿಗಾರ,ಘಟಿಗೇಪ್ಪ ಹುಬ್ಬಳ್ಳಿ, ದೇವೇಂದ್ರಪ್ಪ ಧಾರವಾಡ,ನಿಂಗನಗೌಡ ಪಾಟೀಲ, ಅಶೋಕ ಹುಡೇದ, ಗಂಗಪ್ಪ ಮುಮ್ಮಿಗಟ್ಟಿ, ಮಾಳೇಶ ತೋಟನ್ನವರ, ಪ್ರಕಾಶ ದೊಡವಾಡ, ಫಕ್ಕೀರಪ್ಪ ಹುಬ್ಬಳ್ಳಿ, ನಿಂಗಪ್ಪ ಕಿತ್ತೂರ, ಉಮೇಶ ವಾಲಿಕಾರ, ಮಂಜು ಮುಮ್ಮಿಗಟ್ಟಿ,ಮಲ್ಲಪ್ಪ ಹುಡೇದ, ಮಹಾಬಲೇಶ್ವರ ಹಾದಿಮನಿ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.