ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಅಕ್ರಮ ಜೂಜಾಟದ ಮೇಲೆ ಪೊಲೀಸರ ದಾಳಿ :5ಜನ ವಶಕ್ಕೆ!

ಹುಬ್ಬಳ್ಳಿ

ಇಸ್ಪೀಟ್ ಜೂಜಾಡುತ್ತಿದ್ದ ಸ್ಥಳದ ಮೇಲೆ ಹುಬ್ಬಳ್ಳಿಯ ಪೊಲಿಸರು ದಾಳಿ ನಡೆಸಿ ಹಣ ಹಾಗೂ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಚಾಟ್ನಿ ಕಾಂಪ್ಲೆಕ್ಸ್ ಬಳಿ ನಡೆದಿದ್ದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದವರನ್ನು ನಿವೃತ್ತ ರೇಲ್ವೆ ನೌಕರರು ಎಂದು ಗುರುತಿಸಲಾಗಿದೆ.

ಸಾಂಧರ್ಭಿಕ ಚಿತ್ರ!

ಅಕ್ರಮ ಇಸ್ಪೀಟ್ ಜೂಜಾಟದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಉಪನಗರ ಪೊಲಿಸ್ ಠಾಣೆಯ ಪಿ ಎಸ್ ಐ ಕವಿತಾ ಎಸ್ ಎಮ್ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಜೂಜುಕೊರರ ಮೇಲೆ ದಾಳಿ ನಡೆಸಿ 5ಐದು ಮೋಬೈಲಗಳು,1,40,110ರೂ.ನಗದು ಹಾಗೂ ಜೂಜಿಗೆ ಬಳಸಿದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ!

ದಾಳಿ ವೇಳೆ ಸಿಬ್ಬಂದಿ ಗಳಾದ ಇನ್ಸ್‌ಪೆಕ್ಟರ್ ಮಲ್ಲಪ್ಪ ಎಸ್ ಹೂಗಾರ್,ಪಿ ಎಸ್ ಐ ಕವಿತಾ ಎಸ್ ಎಮ್, ಮತ್ತು ಸಿಬ್ಬಂದಿ ಗಳಾದ ಮಲ್ಲಿಕಾರ್ಜುನ ಧನಿಗೊಂಡ,ಎಸ್.ವಿ.ಯರಗುಪ್ಪಿ,ಮಂಜುನಾಥ ಯಕ್ಕಡಿ,ಮಂಜುನಾಥ ಹಾಲವರ,ಕೃಷ್ಣಾ ಮೋಟೆಬೆನ್ನೂರ,ಪ್ರಕಾಶ ಕಲಗುಡಿ,ರವರ ಕಾರ್ಯವನ್ನು ಅವಳಿನಗರದ ಆಯುಕ್ತರಾದ ರಮನ್ ಗುಪ್ತಾ ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *