ಕಾರ್ಮಿಕನ ಎದೆಗೆ ಹೊಕ್ಕ ಕಬ್ಬಿಣದ ರಾಡ್!
Power city news ಹುಬ್ಬಳ್ಳಿ : ನಗರದಲ್ಲಿ ನಡೆಯುತ್ತಿರುವ ಪ್ಲೈಓವರ್ ಕಾಮಗಾರಿ ವೇಳೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಅಂತರಾಜ್ಯ ಕಾರ್ಮಿಕನೊಬ್ಬ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರಿವ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿ ಕಾಮಾಗಾರಿ ನಡೆಯುತ್ತಿರುವ ನಗರದ ಹೊಸೂರು ಸರ್ಕಲ್ ಬಳಿಯಲ್ಲಿರುವ. ಪ್ಲೈ ಓವರ್ ಕಾಮಗಾರಿಯ ಪಿಲ್ಲರ್ ಮೇಲಿಂದ ಆಯತಪ್ಪಿ ಬಿದ್ದ ಯುವಕನ ಎದೆಗೆ ಮಾರುದ್ದದ ಕಬ್ಬಿಣದ ರಾಡ್ ಸಿಲುಕಿರುವ ಘಟನೆ ನಡೆದಿದೆ.
ಗಾಯಾಳುವನ್ನು ಅಬ್ದುಲ್ ಗಫಾರ್ ಎಂದು ಗುರುತಿಸಲಾಗಿದ್ದು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ಮಧ್ಯಾಹ್ನ ಹೊಸೂರು ಸರ್ಕಲ್ ಬಳಿ ನಡೆಯುತ್ತಿರುವ ಪ್ಲೈಓವರ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಮಿಕ ನೊರ್ವ ಪಿಲ್ಲರ್ ಮೇಲಿಂದ ಬಿದ್ದ ಪರಿಣಾಮ ಕಬ್ಬಿಣದ ರಾಡ್ ಕಾರ್ಮಿಕನ ಬಲ ಭಾಗದ ಎದೆಯನ್ನು ಹೊಕ್ಕಿದೆ. ಗಾಯಾಳು ಕಾರ್ಮಿಕ ಅಬ್ದುಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಅಲ್ಲೇ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ, ಸದ್ಯ ಅಬ್ದುಲ್ ನ ಎದೆಯಲ್ಲಿ ಸಿಕ್ಕಿರುವ ರಾಡ್ ನೋಡಿ ವೈದ್ಯರೇ ಬೆಚ್ಚಿ ಬಿದ್ದಿದ್ದು ಆತನಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಆದರೆ ತುತ್ತಿನ ಚೀಲ ತುಂಬಿಕೊಳ್ಳಲು ಬರುವ ಕಾರ್ಮಿಕರಿಗೆ ನೀಡದಿರುವುದು ಗಮನಾರ್ಹವಾಗಿದೆ. ಅಗತ್ಯ ವಸ್ತುಗಳು ಹಾಗೂ ಅಪಾಯ ತಡೆಗಟ್ಟುವ ಸಲಕರಣಿಗಳು ಇಲ್ಲಿ ನೋಡೊಕು ಸಿಗೋದಿಲ್ಲ.ಸಂಭಂದಪಟ್ಟ ಇಲಾಖೆ ಕ್ರಮ ತೆಗೆದುಕೊಂಡರೆ ಬಡ ಕಾರ್ಮಿಕರ ಜೀವ ಉಳಿಯ ಬಹುದು.