ಜಲಮಂಡಳಿ ಕಾರ್ಮಿಕರೊಂದಿಗೆ ಮೇಯರ್ ಸಭೆ
ಧಾರವಾಡ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯಲ್ಲಿ, ಜಲ ಮಂಡಳಿಯ ಕಾರ್ಮಿಕರು, ಎಲ್&ಟಿ ಕಂಪನಿಯ ಅಧೀನದಲ್ಲಿ ಏಳು ತಿಂಗಳು ಕೆಲಸ ಮಾಡಿದ್ದರ ಸಲುವಾಗಿ ಬಾಕಿ ಇರುವ ಏಳು ತಿಂಗಳ ವೇತನವನ್ನು ನೀಡುವ ಕುರಿತು ಹಾಗೂ ಕಾರ್ಮಿಕರನ್ನು ಪುನರ್ ನೇಮಕಾತಿ ಮಾಡಿಕೊಳ್ಳುವ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ರವರು ಜಲಮಂಡಳಿಯ ಗುತ್ತಿಗೆ ಕಾರ್ಮಿಕರೊಂದಿಗೆ ಸಭೆ ನಡೆಸಿದರು.
ಈ ಹಿಂದೆ ಎಲ್ & ಟಿ ಕಂಪನಿಯ ಅಡಿಯಲ್ಲಿ ಕೆಲಸ ಮಾಡಲು ಜಲ ಮಂಡಳಿಯ ಕಾರ್ಮಿಕರಿಗೆ ಸೂಚಿಸಿದ್ದಾಗ ಅವರು ತಿರಸ್ಕರಿಸಿದ್ದರು. ಹಾಗಾಗಿ ಎಲ್ & ಟಿ ಕಂಪನಿಯು ಪರ್ಯಾಯ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುತ್ತದೆ. ಈ ಹಿಂದೆ ಜಲ ಮಂಡಳಿಯ ಕಾರ್ಮಿಕರು ಕೆಲಸ ಮಾಡಿದ್ದರ ಏಳು ತಿಂಗಳು ಬಾಕಿ ಇರುವ ವೇತನವನ್ನು ನೀಡುವ ಕುರಿತು ಮಹಾಪೌರರು ಆಶ್ವಾಸನೆ ನೀಡಿದರು. ಹಾಗೂ ಪುನರ್ ನೇಮಕಾತಿಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸರ್ಕಾರ ನೀಡಿದ ಆದೇಶ ಹಾಗೂ ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣರವರು, ಪಾಲಿಕೆಯ ಸಭಾನಾಯಕರಾದ ತಿಪ್ಪಣ್ಣ ಮಜ್ಜಗಿರವರು, ಬಸವರಾಜ ಕೊರವರ ರವರು, ದೀಪಕ ಚಿಂಚೋರೆ ರವರು, ಹಾಗೂ ಜಲ ಮಂಡಳಿಯ ಕಾರ್ಮಿಕರ ಸಂಘದ ಪ್ರಮುಖರು ಉಪಸ್ಥಿತರಿದ್ದರು.