ಸ್ಥಳೀಯ ಸುದ್ದಿ
100 ಮೀಟರ್ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ
ಧಾರವಾಡ
ಧಾರವಾಡದ ಖಾಸಗಿ ವಾಹಿನಿಯ ಕ್ಯಾಮರಾಮನ್ ಪ್ರಶಾಂತ ದಿನ್ನಿ ಅವರ ಮಗಳಾದ ಸ್ನೇಹಲ್ ಅವರು 100 ಮೀಟರ್ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕಾರವಾರ ಜಿಲ್ಲೆಯ ಅನಿಕೇತನ ಶಾಲೆಯಲ್ಲಿ 9th ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ನೇಹಲ್, ಕುಮಟಾದಲ್ಲಿ ಡಿಸೆಂಬರ್ 9 ರಂದು ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದು, ಮಗಳ ಸಾಧನೆಗೆ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.