ಸ್ಥಳೀಯ ಸುದ್ದಿ
ದೇಶಸೇವೆಗೆ ಸಜ್ಜಾದ ಯಾದವಾಡ ಗ್ರಾಮದ ಯುವಕರು
ಧಾರವಾಡ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ 4 ಮಂದಿ ಯುವಕರು ದೇಶಸೇವೆಗಾಗಿ ಸಜ್ಜಾಗಿದ್ದು, 3 ಜನ ಅಗ್ನೀಪಥ ಯೋಜನೆಯಲ್ಲಿ ಆಯ್ಕೆಯಾಗಿದ್ದು, ಇನ್ನೊಬ್ಬ ಯುವಕ CISF ಆಯ್ಕೆಯಾಗುವ ಮೂಲಕ ಯಾದವಾಡ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.
1) ಕಾಶೀಮಸಾಬ ಕುತುಬದ್ದೀನ್ ಭಾವಿಮನಿ (PUC ವಿದ್ಯಾರ್ಹತೆ)
2) ಮೃತ್ಯುಂಜಯ ಕುಸುಗಲ್ (PUC ವಿದ್ಯಾರ್ಹತೆ)
3) ರಾಘವೇಂದ್ರ ಬಾಲಕೃಷ್ಣ ಯಲಿಗಾರ (Bcom ವಿದ್ಯಾರ್ಹತೆ) ಈ 3 ಯುವಕರು ಅಗ್ನೀಪಥ ಯೋಜನೆಯಲ್ಲಿ ಆಯ್ಕೆಯಾಗಿ ಅಗ್ನೀವೀರರಾಗಿ ದೇಶಸೇವೆಗೆ ಸಜ್ಜಾಗಿದ್ದಾರೆ.
ಇವರೊಂದಿಗೆ
4) ಸಚಿನ ಕುಸುಗಲ್ (ಏಂಜಿನೀಯರಿಂಗ್ ಪದವಿಧರ) CISF ಗೆ ಆಯ್ಕೆ ಆಗಿದ್ದಾನೆ.
ಇವರೆಲ್ಲರಿಗೂ ಸನ್ಮಾನಿಸಿ ಗೌರವಿಸಿ ದೇಶಸೇವೆಗೆ ಕಳಿಸಿಕೊಡುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಇಟ್ಟುಕೊಂಡಿದ್ದಾರೆ.
ಗ್ರಾಮದ ಯುವಕರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.