ಸ್ಥಳೀಯ ಸುದ್ದಿ
ನಯಾನಗರದಲ್ಲಿ ಕಾರ್ತಿಕೋತ್ಸವ ಸಂಭ್ರಮದಲ್ಲಿ ಸಚಿವ ಮುನೇನಕೊಪ್ಪ ಭಾಗಿ
ಬೆಳಗಾವಿ
ರಾಶಿ ರಾಶಿ ಚುರುಮರಿ, ನೂರಾರು ಮಿರ್ಚಿ ಭಜಿಗಳ ಮಧ್ಯೆ ಕುಳಿತು ಫಳಾರ ಸವಿದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಮಠದಲ್ಲಿ ಕಾರ್ತಿಕ ಅಮವಾಸ್ಯೆ ಪ್ರಯುಕ್ತ ದೀಪೋತ್ಸವ ಏರ್ಪಡಿಸಲಾಗಿತ್ತು.
ಮಠದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು. ಈ ವೇಳೆ ನೂರಾರು ಭಕ್ತರು ತಮ್ಮ ಮನೆಗಳಿಂದ ಚುರುಮುರಿಯ ಫಳಾರ, ತುಪ್ಪದ ಅವಲಕ್ಕಿ, ಮಿರ್ಚಿ ತೆಗೆದುಕೊಂಡು ಬಂದಿದ್ದರು.
ಅದೆಲ್ಲವನ್ನೂ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳ ಮುಂದೆ ರಾಶಿ ಹಾಕಿ ಎಲ್ಲವನ್ನೂ ಸೇರಿಸಿ ಬಳಿಕ ಭಕ್ತರು ಪ್ರಸಾದವಾಗಿ ತೆಗೆದುಕೊಂಡು ಹೋಗುವುದು ರೂಢಿ.
ಇದರಂತೆಯೇ ಫಳಾರ ರಾಶಿ
ಹಾಕಲಾಗಿತ್ತು. ಇದರ ಮುಂದೆಯೇ ಬಂದು ನೆಲದ ಮೇಲೆಯೇ ಕುಳಿತ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಭರ್ಜರಿ ಫಳಾರ ಸವಿದರು.
ಸಚಿವರಿಗೆ ಕಾಡಾ ಅಧ್ಯಕ್ಷ ಡಾ. ವಿ.ಐ, ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ ಸಹ ಸಾಥ್ ನೀಡಿ ಭರ್ಜರಿ ಫಳಾರ, ಮಿರ್ಚಿ ಮಂಡಕ್ಕಿ, ಅವಲಕ್ಕಿ ಸವಿದರು.