ಸ್ಥಳೀಯ ಸುದ್ದಿ
ವಾಲ್ಮೀಕಿ ಜಯಂತಿಯಂದು ಸಮುದಾಯ ಭವನ ಉದ್ಘಾಟನೆ
ಧಾರವಾಡ
ವಾಲ್ಮೀಕಿ ಜಯಂತಿ ಶುಭ ಸಂದರ್ಭದಲ್ಲಿ ಧಾರವಾಡದ ಕೋಳಿಕೇರಿಯಲ್ಲಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ ಮಾಡಲಾಯಿತು.
ಧಾರವಾಡ ಗ್ರಾಮೀಣ 71ನೇ ವಿಧಾನಸಭಾ ಕ್ಷೇತ್ರದ 9(ಹಳೆಯ)8(ಹೊಸ)ವಾರ್ಡ್ ಕೋಳಿಕೇರಿ ಯಲ್ಲಿ ಈ ಸಮುದಾಯ ಭವನ ನಿರ್ಮಾಣವಾಗಿದೆ.
ವಿನಯ್ ಕುಲಕರ್ಣಿ ಅವರು ಸಚಿವರಾಗಿದ್ದಾಗ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಗೆ 50ಲಕ್ಷ ಅನುದಾನವನ್ನು ಕೊಟ್ಟಿದ್ದರು.
ಈಗ ಈ ನಿರ್ಮಾಣವಾಗಿದ್ದು, ವಿನಯ ಕುಲಕರ್ಣಿ ಅವರ ಅನುಪ ಸ್ಥಿತಿಯಲ್ಲಿ ಇಂದು ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀಮತಿ ಶಿವಲೀಲಾ ಹಾಗೂ ಸಮಸ್ತ ವಾಲ್ಮೀಕಿ ಸಮಾಜದ ಹಿರಿಯರ ಜೋತೆಗೆ ಭವನ ಉದ್ಘಾಟನಾ ಸಮಾರಂಭ ನೆರವೇರಿಸಿದ್ರು.
ಇದರ ಜೋತೆ ಜೋತೆಗೆ ಗರಗ ಗ್ರಾಮದಲ್ಲಿಯೂ ಕೂಡ ಶಿವಲೀಲಾ ಕುಲಕರ್ಣಿ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.