ಸ್ಥಳೀಯ ಸುದ್ದಿ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಧಾರವಾಡ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಇರುವ ಮಹರ್ಷಿ ವಾಲ್ಮೀಕಿ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ರು.
ಸನ್ಮಾನ್ಯ ಮುಖ್ಯಮಂತ್ರಿಗಳು ಸಮಾಜದ ಏಳ್ಗೆಗಾಗಿ ಮೀಸಲಾತಿಯನ್ನು ನೀಡಿದ್ದರ ಸಲುವಾಗಿ ವಾಲ್ಮೀಕಿ ಸಮಾಜದ ಪರವಾಗಿ ಮಹಾಪೌರರು ಕೃತಘ್ನತೆ ತಿಳಿಸಿದರು.
ಸಮಾಜದ ಮುಖಂಡರು ವಾಲ್ಮೀಕಿ ಭವನ ನಿರ್ಮಿಸಿಕೊಡುವ ಬಗ್ಗೆ ಮಹಾಪೌರರ ಗಮನಕ್ಕೆ ತಂದರು.
ಮನವಿಗೆ ಸ್ಪಂದಿಸಿದ ಮಹಾಪೌರರು ಈಗಾಗಲೇ ವಾಲ್ಮೀಕಿ ಭವನ ನಿರ್ಮಿಸಲು 2 ಕೋಟಿ ಅನುದಾನ ನೀಡಿರುವುದಾಗಿ ತಿಳಿಸಿದರು.
ಅತೀ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ಸಮಾಜದ ಬಂಧುಗಳಿಗೆ ನೀಡಿದರು.