ಸ್ಥಳೀಯ ಸುದ್ದಿ
ಮಾರುಕಟ್ಟೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಧಾರವಾಡ
ಧಾರವಾಡದ ಮಹಾನಗರ ಪಾಲಿಕೆ ಕಚೇರಿಯಿಂದ 400 ಮೀಟರ್ ದೂರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಖ್ಯಾರೆ ಎನ್ನದೇ ನಮಗೆ ವಿಷಯ ಗೊತ್ತೆ ಇಲ್ಲಾ ಎನ್ನುವಂತೆ ಸುಮ್ಮನಾಗಿದ್ದಾರೆ.
ಧಾರವಾಡದ ಸುಭಾಸ ರಸ್ತೆ ಮುಂದೆ ಇರುವ ಮಾರ್ಕೇಟ್ ಏರಿಯಾದಲ್ಲಿ ಕುಡಿಯುವ ನೀರಿಗಾಗಿ ನೀರಿನ ಟ್ಯಾಂಕ್ ರೀತಿಯಲ್ಲಿ ಸುಂದರವಾದ ಕಲಾಕೃತಿಯನ್ನು ಮಾಡಿದ್ದು, ಇದು ಈಗ ಇದ್ದು ಇಲ್ಲದಂತೆ ಆಗಿದೆ. ಇಲ್ಲಿ ವ್ಯಾಪಾರ ಮಾಡಿಕೊಂಡು ಇರುವ ಜನರಿಗೆ ನೀರಿಗಾಗಿ ತೊಂದ್ರೆ ಅನುಭವಿಸುವಂತೆ ಆಗಿದೆ.
ಧಾರವಾಡದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಮೇಯರ್ ಈರೇಶ ಅಂಚಟಗೇರಿ ಅವರು ಈ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳ ಮುಖಾಂತರ ಯಾವ ರೀತಿ ಬಗೆಹರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಪವರ್ ಸಿಟಿ ನ್ಯೂಸ್ ಕನ್ನಡ
ಸತ್ಯ ಸದಾಕಾಲ