ಅರಣ್ಯ ಇಲಾಖೆಗೆ ಬೇಕಿದೆ ಪೊಲೀಸರ ಸಹಕಾರ
ಬೆಂಗಳೂರು
ಧಾರವಾಡ ಜಿಲ್ಲೆಯಲ್ಲಿ ಸ್ಥಳೀಯ ಭಾಷೆಯನ್ನು ಮಾತನಾಡುತ್ತಾ ಇರುವ 8 ಜನರ ಗ್ಯಾಂಗ್ ಒಂದು ಆಕ್ಟಿವ್ ಆಗಿ ನಿರಂತರವಾಗಿ ಗಂಧದ ಮರಗಳ್ಳತನ ಮಾಡುತ್ತಲೇ ಇದೆ. ಆದ್ರೆ ಇನ್ನುವರೆಗೂ ಆರೋಪಿಗಳ ಬಂಧನವಾಗಿಲ್ಲಾ.
2 ವರ್ಷಗಳಿಂದ ಜಿಲ್ಲೆಯಲ್ಲಿ ಗಂಧದ ಮರಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದ ಅರಣ್ಯ ಇಲಾಕೆ ಅಧಿಕಾರಿಗಳಿಗೆ ಈ ಗ್ಯಾಂಗನಿಂದ ತಲೆ ಬಿಸಿ ಹೆಚ್ಚಾಗಿದೆ.
ಮೊದಲು ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ಗಂಧದ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳ ಪೈಕಿ ಕೆವಲ ಒಬ್ಬ ಆರೋಪಿ ಬಂಧನವಾಗಿದ್ದು, ಇನ್ನುಳಿದ ಇಬ್ನರು ಆರೋಪಿಗಳು ಬಂಧನವಾಗದೇ ತಲೆಮರೆಸಿಕೊಂಡಿದ್ದರು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇವರೆಲ್ಲಾ ನವಲಗುಂದ ತಾಲೂಕಿನ ತಿರ್ಲಾಪೂರ ಊರಿನವರಾಗಿದ್ದಾರೆ.
8 ಜನರ ಗ್ಯಾಂಗ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೆ ಆವರಣದಲ್ಲಿ, ಎಸಿ ಮನೆ ಆವರಣದಲ್ಲಿ, ಕೆಸಿಡಿ ಕಾಲೇಜು ಆಚರಣದಲ್ಲಿ, ಹಾಗೂ ಸಿಇಓ ಮನೆ ಆವರಣದಲ್ಲಿ ಗಂಧದ ಮರ ಕಡಿದುಕೊಂಡು ಹೊತ್ತುಕೊಂಡು ಹೋಗಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಉಪ್ಪಾರ ಅವರು ಮಾತನಾಡಿದ್ದಾರೆ ಕೇಳಿ…
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಗಂಧದ ಚೋರರ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಹುಡುಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲಾಧಿಕಾರಿ ಮನೆ ಆವರಣದಲ್ಲಿಯೇ ಈ ರೀತಿ ಗಂಧದ ಮರಗಳ್ಳತನ ನಡೆದ್ರೆ, ಉಳಿದಂತೆ ಅರಣ್ಯ ಪ್ರದೇಶದಲ್ಲಿ ಇರುವ ಗಂಧದ ಮರಗಳು ಸುರಕ್ಷಿತವಾಗಿ ಇರ್ತಾವಾ? ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.
ಜಿಲ್ಲೆಯಲ್ಲಿ ಗಂಧದಚೋರರ ಹಾವಳಿ ತಪ್ಪಿಸಲು ಅರಣ್ಯಇಲಾಖೆ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಸಾಥ್ ನೀಡಬೇಕಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಟಾಸ್ಕ ಫೊರ್ಸ ಸಮಿತಿ ರಚನೆ ಮಾಡುತ್ತಾರಾ? ನೋಡಬೇಕಿದೆ.
ಪವರ್ ಸಿಟಿನ್ಯೂಸ್ ಕನ್ನಡ
ಸತ್ಯ ಸದಾಕಾಲ