ಸ್ಥಳೀಯ ಸುದ್ದಿ

ಅಖಿಲ ಭಾರತ ಮಹಾಪೌರರ ಸಮ್ಮೇಳನ

ಛತ್ತಿಸಘಡ

ಛತ್ತೀಸಘಡ ರಾಯಪುರದಲ್ಲಿ ನಡೆದ ಅಖಿಲ ಭಾರತ ಮಹಾಪೌರರ ಪರಿಷತ್ತಿನ ಸಮಾರೋಪ ಸಮಾರಂಭದಲ್ಲಿ ಛತ್ತೀಸಘಡನ ಘನವೆತ್ತ ರಾಜ್ಯಪಾಲರು ಅನಸೂಯಾ ಉಕಿ ಅವರು ಕಾರ್ಯಕ್ರಮ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ಮಹಾಪೌರರು ನಿರ್ವಹಿಸಬೇಕಾದ ಕಾರ್ಯನಿರ್ವಹಣೆ ಹಾಗೂ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ನೀಡಿದರು.

ಎರಡು ದಿನಗಳ ಈ ಅಖಿಲ ಭಾರತ ಮಹಾಪೌರರ ಪರಿಷತ್ತಿನಲ್ಲಿ ನೂರಕ್ಕೂ ಅಧಿಕ ಮಹಾಪೌರರು ತಮ್ಮ ಮಹಾನಗರ ಪಾಲಿಕೆಯಲ್ಲಿ ನಡೆದ ಕಾರ್ಯಗಳ ಬಗ್ಗೆ ನೂತನ ಕಾರ್ಯ ಅನುಷ್ಠಾನಗಳ ಬಗ್ಗೆ ಪರಸ್ಪರ ಸಮಾಲೋಚನೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾಗಿ ನಿಯುಕ್ತರಾದ ಈರೇಶ ಅಂಚಟಗೇರಿ ಅವರು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಅನುಷ್ಠಾನಗೊಂಡ ಹಾಗು ಮುಂಬರುವ ದಿನಮಾನಗಳಲ್ಲಿ ಕಾರ್ಯಪ್ರವೃತ್ತವಾಗಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ನೆರೆದಂತ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಶುಭ ಕೋರಿದರು..

ಕಾರ್ಯಕ್ರಮದಲ್ಲಿ ರಾಯಪುರ ಲೋಕಸಭಾ ಸದಸ್ಯರು ಸುನೀಲ ಸೋನಿ ಪರಿಷತ್ತಿನ ಅಧ್ಯಕ್ಷರು ನವೀನ ಜೈನ ರಾಯಪುರ ಮಹಾಪೌರರು ಇಜಾಜ ತೇವರ ಉಮಾಶಂಕರ ಹಾಗು ಪದಾಧಿಕಾರಿಗಳು ಮಹಾಪೌರರು ಗಣ್ಯಮಾನ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *