ಅಮ್ರತ ಭಾರತಿಗೆ ಕನ್ನಡ ದಾರುತಿ ಕಾರ್ಯಕ್ರಮ.
ಧಾರವಾಡ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಧಾರವಾಡ ಇವರ ನೇತೃತ್ವದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಧಾರವಾಡ ಇವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕನ್ನಡದಾರುತಿ ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಹಾಪೌರರು, ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ,ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆರಂಭಿಸಿದ ಹರ್ ಘರ್ ತಿರಂಗಾ ಯೋಜನೆಯು ದೇಶವೇ ಹೆಮ್ಮೆ ಪಡುವ ಒಂದು ವಿಷಯ ಎಂದು ಹೇಳಿದರು.
ಅಮ್ರತ ಭಾರತಿಗೆ ಕನ್ನಡದಾರುತಿ ದ್ರಶ್ಯನಾಟಕದ ಕೆಲವು ದ್ರಶ್ಯಗಳ ಇಲ್ಲಿವೆ.
ಈ ಸಂದರ್ಭದಲ್ಲಿ ಶ್ರೀ ಎಸ್.ಬಿ. ಹಿಂಚಗೇರಿ ರವರು, ಶ್ರೀ ರಾಧಾಕೃಷ್ಣ ರವರು, ಶ್ರೀ ರಮೇಶ ಪರವಿನಾಯ್ಕರ್ ರವರು, ಶ್ರೀ ಸೋಮು ದೊಡ್ಡಮನಿ ರವರು, ಶ್ರೀ ಕುಮಾರ ಬೆಕ್ಕೇರಿ ರವರು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು,ಹಾಗೂ ಗಣ್ಯರು ಉಪಸ್ಥಿತರಿದ್ದರು.