ಕಲ್ಬುರ್ಗಿಸ್ಥಳೀಯ ಸುದ್ದಿ
ಬೆಲ್ಲದ ಚಹಾಕ್ಕೆ “ಸೈ” ಎಂದ ಅಫಜಲಪೂರ ಜನ!
ಕಲಬುರ್ಗಿ ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ಬೆಲ್ಲದ ಚಹಾ ಅಂಗಡಿಯನ್ನು ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರರು ಉದ್ಘಾಟಿಸಿ ಶುಭ ಹಾರೈಸಿದರು.ಹಾಗೂ ಇದೆ ಸಂದರ್ಭದಲ್ಲಿ ಘತ್ತರಗಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿಠ್ಠಲ ನಾಟಿಕರ್ ಅವರು ಕೂಡ ಚಹಾ ಉದ್ಯಮಕ್ಕೆ ಶುಭಾಶಯ ಕೊರಿದರು.
ಸಾಮಾನ್ಯವಾಗಿ ದಿನ ನಿತ್ಯ ಸಕ್ಕರೆ ಚಹದ ಮೂಲಕ ಆರಂಭವಾಗುವ ಜನ ಸಾಮಾನ್ಯರ ದಿನಚರಿ ಸಕ್ಕರೆಯ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಅರಿವಿಗೆ ಬಾರದೆ ದೇಹಕ್ಕೆ ತಂದೊಡ್ಡುತ್ತದೆ. ಆದರೆ ಇನ್ನೂ ಸಕ್ಕರೆಯ ಚಹಾಕ್ಕೆ “ನೋ ಎನ್ನಿ” ಇಂದಿನಿಂದಲೆ ಬೆಲ್ಲದ ಚಹಾ ಸೇವಿಸಲು ಆರಂಭಿಸಿ ಕಾಲ ಯಾವುದೇ ಇರಲಿ ಮುಂಜಾನೆಯ ಆರಂಭವನ್ನು ಚಹಾ ಮೂಲಕ ಮಾಡಿದರೇನೆ ಒಂದು ರೀತಿಯ ಖುಷಿ ಸಿಗುವುದು. ಅದರಲ್ಲೂ ಶಕ್ತಿಯನ್ನು ಹೆಚ್ಚಿಸುವ ವಿಷಯಕ್ಕೆ ಬಂದರೆ ಬೆಲ್ಲದ ಚಹಾ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಬೆಲ್ಲ ಬಳಸುವುದು ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ತೂಕ ಇಳಿಸುವುದರಿಂದ ಇತರ ಅನೇಕ ರೋಗಗಳಿಗೆ ಬೆಲ್ಲವು ತುಂಬಾ ಉಪಯುಕ್ತವಾಗಿದೆ.