ಪೌರ ಕಾರ್ಮಿಕರಿಗಾಗಿ ಖಾಯಂ ಮನೆಗಳು
ಹುಬ್ಬಳ್ಳಿ
ಹುಬ್ಬಳ್ಳಿ ಮಂಟೂರ ರಸ್ತೆಯಲ್ಲಿರುವ ಬಿಡನಾಳದ ಹತ್ತಿರ ಮಹಾನಗರ ಪಾಲಿಕೆಯ ವತಿಯಿಂದ ಖಾಯಂ ಪೌರಕಾರ್ಮಿಕರಿಗಾಗಿ ನಿರ್ಮಾಣಗೊಳ್ಳುತ್ತಿರುವ 320 ಮನೆಗಳ ಕಾಮಗಾರಿಯ ವೀಕ್ಷಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು ಅವರ ಮನೆಗಳ ಕಾಮಗಾರಿಯು ಇನ್ನೂ ಪೂರ್ಣವಾಗದ ಸಮಸ್ಯೆಗಳ ಬಗ್ಗೆ ಮಹಾಪೌರರ ಮುಂದೆ ತಿಳಿಸಿದಾಗ ಅಸಮಾಧಾನಗೊಂಡ ಮಹಾಪೌರರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡರು.
ಬರುವ ಅಕ್ಟೋಬರ್ ತಿಂಗಳೊಳಗಾಗಿ 25% ಕಾಮಗಾರಿಯನ್ನು ಪೂರ್ಣಗೊಳಿಸಿ, ಈ ವರ್ಷಾಂತ್ಯದಲ್ಲಿ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಪೌರಕಾರ್ಮಿಕರಿಗೆ ಅನುಕೂಲಮಾಡಿಕೊಡಬೇಕು ಹಾಗೂ ಆಗಸ್ಟ್ 17 ರಂದು ಈ ವಿಷಯದ ಬಗ್ಗೆ ಪಾಲಿಕೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಉಮಾ ಮುಕುಂದ, ಪಾಲಿಕೆಯ ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿರವರು, ವಿರೋಧಪಕ್ಷದ ನಾಯಕರಾದ ದೋರಾಜ ಮನಕುಂಟ್ಲಾ, ಪಾಲಿಕೆಯ ಸದಸ್ಯರಾದ ಶರಣಯ್ಯ ಹಿರೇಮಠ ರವರು, ಪಾಲಿಕೆಯ ಅಧಿಕಾರಿಗಳಾದ ವಿಜಯಕುಮಾರ, ಶರೀಫ ರವರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.