ಸ್ಥಳೀಯ ಸುದ್ದಿ
ಕವಿವಿ ಪ್ರಾಧ್ಯಾಪಕನಿಗೆ ಜಪಾನ ದೇಶದ ಬ್ರಿಡ್ಜ್ ಫೆಲೋಷಿಪ್
ಧಾರವಾಡ
ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಸ್ಯ ಆರೋಗ್ಯ ಹಾಗೂ ರೋಗ ನಿರ್ಣಯ ಪ್ರಯೋಗಾಲಯದ ಮುಖ್ಯಸ್ಥರಾದ ಡಾ. ಸುಧೀಶ ಜೋಗಯ್ಯರವರಿಗೆ ಜಪಾನ ದೇಶದ 2021 ನೇ ಸಾಲಿನ ಪ್ರತಿಷ್ಟಿತ ಬ್ರಿಡ್ಜ್ ಫೆಲೋಷಿಪ್ ದೊರೆತಿದೆ.
ಈ ಮೂಲಕ ಡಾ. ಜೋಗಯ್ಯರವರು ಜಪಾನಿನ ರೈಕನ್ ಸಂಶೋಧನಾ ಸಂಸ್ಥೆ, ಯಾಕೊಹಾಮಾ ಮತ್ತು ಯಾಮಾಗುಚಿ ವಿ.ವಿ.ಯ ಸಹಯೋಗದಲ್ಲಿ “ಬಯೋ ಇನಾಕ್ಯುಲೆಂಟ್ ಸ್ಟ್ರೆಸ್ ಅಡಾಪ್ಟೆಷನ್ ಅಂಡರ್ ಎಕ್ಸ್ಟ್ರಿಮ್ ಕಂಡಿಷನ್” ಎಂಬ ವಿಷಯದ ಕುರಿತು ಅಧ್ಯಯನಕ್ಕೆ ತಮ್ಮ ಸಂಶೋಧನಾ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ.
ಜಪಾನ ಹಾಗೂ ಕರ್ನಾಟಕ ವಿ.ವಿ.ಯ ಸಂಶೋಧನಾ ಸಹಯೋಗವನ್ನು ಗಟ್ಟಿಗೊಳಿಸುವಲ್ಲಿ ಸಹಕರಿಸುತ್ತಿರುವ ಕ.ವಿ.ವಿಯ ಕುಲಪತಿಗಳು ಹಾಗೂ ರಿಜಿಸ್ಟರ್ ಅವರಿಗೆ ಡಾ.ಜೋಗಯ್ಯ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.