ಪತ್ರಕರ್ತನ ಚಿಕಿತ್ಸೆಗೆ 2 ಲಕ್ಷ ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ!
ಹುಬ್ಬಳ್ಳಿ
ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಮನವಿ ಮೇರೆಗೆ ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಪ್ರಕಾಶ್ ಮಹಾಜನ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ಪ್ರಕಾಶ್ ಮಹಾಜನ ಶೆಟ್ಟರ್ ಅವರು ೨ ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ
ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಹಿಮೊಫೀಲಿಯಾ (ಗಾಯವಾದಾಗ ರಕ್ತ ಹರಿಯುವ ಪ್ರಕ್ರಿಯೆ ನಿಲ್ಲದೇ ಇರುವ ಹಾಗೂ ದೇಹದ ಯ್ಯಾವುದೇ ಭಾಗಕ್ಕೆ ಅಲ್ಪ ಪೆಟ್ಟಾದರೂ “ಆಂತರಿಕ” ರಕ್ತಸ್ರಾವ ಆಗುವ) ಎಂಬ ಮಾರಣಾಂತಿಕ ಹಾಗೂ “ವಂಶ”ಪಾರಂಪರಿಕ ವಾದ ಖಾಯಿಲೆಯಿಂದ ಬಳಲುತ್ತಿರುವ ಅವರ ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದ್ದು, ಅವರು ಆರ್ಥಿಕ ಸಂಕಷ್ಟದಲ್ಲಿರುವ ಬಗ್ಗೆ ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯ ಸಂಘದ ಗಮನಕ್ಕೆ ತಂದಿತ್ತು.
ಇನ್ನೂ ಕೆ ಯು ಡಬ್ಲ್ಯೂ ಜೆ ಸಂಘದಿಂದ “ಆಪತ್ಬಾಂಧವ” ನಿಧಿಯಿಂದ 30,600ರೂ.ಗಳನ್ನು ನೀಡಲಾಗಿದೆ.
ಪ್ರಕಾಶ ಮಹಾಜನ ಶೆಟ್ಟರ್ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ತುರ್ತು ನೆರವು ನೀಡುವಂತೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿರುವ ಸಿಎಂ, ಮಾನವೀಯ ದೃಷ್ಟಿಯಿಂದ ಚಿಕಿತ್ಸೆ ಭಾಗವಾಗಿ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ. ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೃತಜ್ಞತೆಗಳನ್ನು ಸಲ್ಲಿಸಿದೆ.