ಸ್ಥಳೀಯ ಸುದ್ದಿ
ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಬೆಂಗಳೂರು
ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಪ್ರಹ್ಲಾದ ಜೋಶಿ ಅವರು ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ.
ಕ್ವಿನಾನಾದ ಟೈಂಕಿ ಯಲ್ಲಿರುವ ಲಿಥಿಯಂ ಸಂಸ್ಕರಣ ಕೇಂದ್ರಕ್ಕೆ ಸಂಪನ್ಮೂಲ ಹಾಗೂ ಉತ್ತರ ಆಸ್ಟ್ರೇಲಿಯಾದ ಸಚಿವರಾದ Madeleine King MP , ಅವರ ಜೊತೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ರು.
ಇದು ಆಸ್ಟ್ರೇಲಿಯಾದ ಪ್ರಥಮ ಸ್ವಯಂ ಚಾಲಿತ ಲಿಥಿಯಂ ಹೈಡ್ರಾಕ್ಸೈಡ್ ಸಂಸ್ಕರಣ ಕೇಂದ್ರವಾಗಿದೆ.
ಲಿಥಿಯಂ ಹೈಡ್ರಾಕ್ಸೈಡ್, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯ ತಯಾರಿಕೆಗೆ ಬೇಕಾಗುವ ಪ್ರಮುಖ ಖನಿಜಾಂಶವಾಗಿದೆ. ಜಂಟಿಯಾಗಿ ಹೂಡಿಕೆ ಮಾಡುವುದರ ಮೂಲಕ ಆಸ್ಟ್ರೇಲಿಯಾದಲ್ಲಿರುವ ಲಿಥಿಯಂ ಸಂಸ್ಕರಣ ಕೇಂದ್ರಗಳನ್ನು ಯಾವ ರೀತಿಯಾಗಿ ಸದುಪಯೋಗಪಡಿಸಿಕೊಳ್ಳಬಹುದು ಹಾಗೂ ಖನಿಜಾಂಶಗಳ ಕ್ಷೇತ್ರದಲ್ಲಿ ಅಗತ್ಯ ಸಹಕಾರ ವೃದ್ಧಿಸುವ ಕುರಿತು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಚರ್ಚಿಸಿದ್ರು.