ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಅನಿರ್ದಿಷ್ಟ ಮುಷ್ಕರ: ವಿಜಯ್ ಗುಂಟ್ರಾಳ್!
ಹುಬ್ಬಳ್ಳಿ
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಮತ್ತು ನೌಕರರ ಸಂಘ ದಿಂದ ಇಂದು ವಿಜಯ್ ಗುಂಟ್ರಾಳ ನೇತೃತ್ವದ ತಂಡ ಅವಳಿನಗರದ ಪಾಲಿಕೆ ನೂತನ ಮೇಯರ ಆದ ಈರೇಶ ಅಂಚಟಗೇರಿ ಯವರನ್ನ ಭೇಟಿಯಾಗಿ ಸುಮಾರು ಹದಿನಾಲ್ಕು ವರ್ಷಗಳಿಂದಲೂ ಬಗೆ ಹರಿಯದ ಸಮಸ್ಯೆಗಳನ್ನು ಕೆಲಕಾಲ ಚರ್ಚಿಸಿದರು.
1) ರಾಜ್ಯಾದ್ಯಂತ ಎಲ್ಲ 31 ಜಿಲ್ಲೆಗಳ ಪ್ರತಿಯೊಬ್ಬ ಗುತ್ತಿಗೆ ಆಧಾರಿತ ಪೌರಕಾರ್ಮಿಕರನ್ನೂ ಖಾಯಂ ಗೊಳಿಸಿ. 1970ರ ಭಾರತೀಯ ಕಾಯ್ದೆ ಪ್ರಕಾರ ಪೌರ ಕಾರ್ಮಿಕರ 14 ಪ್ರವಧಾನಗಳನ್ನು ಕಡ್ಡಾಯವಾಗಿ ಒದಗಿಸ ಬೇಕು.
2)ಈಗಾಗಲೇ ಕಳೆದ 12ವರ್ಷಗಳ ಹಿಂದೆಯೆ ಆಗಿನ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಸಂಘಕ್ಕೆ ಪಾಲಿಕೆಯ ಆವರಣದಲ್ಲಿ ಪ್ರತ್ಯೇಕ ಕಚೇರಿ ನಿರ್ಮಿಸಿ ಕೊಡಲು ಒಪ್ಪಿಗೆ ಸೂಚಿಸ ಲಾಗಿತ್ತು ಆದರೆ ಅದನ್ನ ಕಾರ್ಯ ರೂಪಕ್ಕೆ ತರುವ ವ್ಯವಸ್ಥೆ ಕೂಡಲೇ ಆಗಬೇಕು.
3)ಕರೋನಾ ಕೋವಿಡ್-19 ರಾಷ್ಟ್ರೀಯ ವಿಪತ್ತು ನಿರ್ವಹಣೆಯ ವೇಳೆ ಕರ್ತವ್ಯ ನೀರತ ಅವಳಿನಗರದ ಇಬ್ಬರು ಪೌರ ಕಾರ್ಮಿಕರು ಮೃತ ಪಟ್ಟಿದ್ದು ತಲಾ ಒಂದು ಕುಟುಂಬಕ್ಕೆ 30ಲಕ್ಷ ರೂ. ಗಳ ಪರಿಹಾರ ಇ ಕೂಡಲೇ ಪಾಲಿಕೆಯಿಂದ ಬಿಡುಗಡೆ ಯಾಗಬೇಕು.
4) ಕನಿಷ್ಠ ವೇತನ ವ್ಯತ್ಯಾಸ ಬಾಕಿ ಇರುವ ರೂ. 9ಕೋಟಿ ಗಳನ್ನು ಕೂಡಲೇ ಪಾವತಿಸ ಬೇಕು.
5)ಪಾಲಿಕೆಯ 868 ಮಹೀಳಾ ಪೌರ ಕಾರ್ಮಿಕರ ವೈದ್ಯಕೀಯ ನೀಧಿ 21.70ಲಕ್ಷವನ್ನು ಕೂಡಲೇ ಭರಿಸ ಬೇಕು.
6)ಇ ಹಿಂದಿನ 2ವರ್ಷದ ತುಟ್ಟಿ ಭತ್ಯೆ 2ಕೋಟಿರೂ. ಗಳನ್ನು ಕೂಡಲೇ ಪಾವತಿಸಬೇಕು.
7)ಅವಳಿನಗರದ ಮಹಾನಗರದ ಪಾಲಿಕೆಯಲ್ಲಿ ಬಯೋಮೆಟ್ರೀಕ್ ಹಾಜರಾತಿ ಖಾಯಂ ಗೋಳಿಸಬೇಕು.
8)ಪಾಲಿಕೆಯ ಎಲ್ಲ ಪೌರ ಕಾರ್ಮಿಕರಿಗೆ ಎರಡು ಜೋತೆ ಫೂಡ್ ಗ್ರೇಡ್ ಟೀಫಿನ್ ಬಾಕ್ಸ್ ಮತ್ತು ಕುಡಿಯಲು ನೀರಿನ ಬಾಟಲ್ ಗಳ ಪಾಲಿಕೆಯಿಂದ ಕೂಡಲೆ ನೀಡಬೇಕು.
9)ಪಾಲಿಕೆಯ ಎಲ್ಲ ಪೌರ ಕಾರ್ಮಿಕರಿಗೆ ಜೀವ ವಿಮಾ ಮಾಡಿಸಬೇಕು.
10)2000/ರೂ ಗಳನ್ನು ಪ್ರತಿ ತಿಂಗಳು ಸಂಕಷ್ಟ ಭತ್ಯೆ ನೀಡಬೇಕು.
11)ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಸಭೆಯ ನಡಾವಳಿಗಳು ಮತ್ತು ನಿರ್ದೇಶನ ಗಳನ್ನು ಕೂಡಲೇ ಅನುಷ್ಠಾನ ಗೊಳಿಸಬೇಕು
12) ಪಾಲಿಕೆಯ ಎಲ್ಲ ಪೌರ ಕಾರ್ಮಿಕರಿಗೆ ಶಿಸ್ತು ಬದ್ಧ ಜಂಟಿ ಸಹಿ ಉಳ್ಳ ಗುರುತಿನ ಚೀಟಿ ಪೂರೈಸಬೇಕು.
13) ನಮೋನೆ 6ರಲ್ಲಿ ಮಾಸಿಕ ವೇತನ ಧೃಢಿಕೃತ ಚೀಟಿ ಮೂಲಕ ನೀಡುವುದು.
14)ಎಲ್ಲ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಈ ಕೂಡಲೇ ಪೂರೈಸಬೇಕು.
15)ಪಾಲಿಕೆಯ ಎಲ್ಲ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿ ಊಟದ ಕೂಡಲೇ ವ್ಯವಸ್ಥೆ ಮಾಡಬೇಕು. ಎಂದು ಮನವಿ ಸಲ್ಲಿಸಿದ್ದು ಒಂದು ವೇಳೆ ಮೇಲ್ಕಂಡ ಬೇಡಿಕೆಗಳನ್ನು ಅನುಷ್ಠಾನ ಗೋಳಿಸದೆ ಹೋದಲ್ಲಿ ರಾಜ್ಯಾದ್ಯಂತ ಎಲ್ಲ ಪೌರ ಕಾರ್ಮಿಕರ ವೃಂದ ದಿಂದ ಅನಿರ್ಧಿಷ್ಟ ಮುಷ್ಕರವನ್ನು ಇದೆ ದಿನಾಂಕ 1ಜೂಲೈ ತಿಂಗಳಿನಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದೆ ವೇಳೆಗೆ ನೂತನ ಮಹಾಪೌರ ಈರೇಶ ಅಂಚಟಗೇರಿಯವರನ್ನ ಸನ್ಮಾನಿಸಿ ಗೌರವಿಸಲಾಯಿತು.