ಕರ್ನಾಟಕ ದಲಿತ ಸಂಘರ್ಷ ಸಮೀತಿಯಿಂದ ಯುವ ಪದಾದಿಕಾರಿಗಳ ನೇಮಕ:ವಿಜಯ್ ಗುಂಟ್ರಾಳ್
ಹುಬ್ಬಳ್ಳಿ: ಜಿಲ್ಲೆಯಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುಧ್ಧ ಹೋರಾಟ ಮತ್ತು ಜನಪರ ವಿವಿಧ ಬೇಡಿಕೆ ಗಳು ಹಾಗೂ ನೊಂದವರ ಪಾಲಿನ ಧ್ವನಿಯಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮೀತಿಯು ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ವಿರುದ್ಧದ ಕಾನೂನು ಬದ್ಧ ಹೊರಾಟಕ್ಕಾಗಿ ಹೊಸ ರೂಪುರೇಷೆಗಳನ್ನು ಯೋಜಿಸಿದೆ. ಎಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಎಂದು ಕ.ದ.ಸಂ.ಸ. ಸಂಘಟನೆಯ ಜಿಲ್ಲಾ ಸಂಚಾಲಕರಾದ ವಿಜಯ್ ಗುಂಟ್ರಾಳ ಅವರು ತಿಳಿಸಿದ್ದಾರೆ.
ದಿನಾಂಕ 24/6/2022 ರಂದು ನಡೆದ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಂಘಟನೆಯ ಬಲವರ್ಧನೆಗೆ ಅವಳಿನಗರದ ವಿವಿಧ ಪ್ರದೇಶಗಳ ಉತ್ಸಾಹಿ ಯುವಕರನ್ನ ನೇಮಕ ಮಾಡಲಾಗಿದೆ. ಎಂದು ಮಾಧ್ಯಮ ಪ್ರಕಟನೆ ನೀಡಿದ್ದಾರೆ.
1) ಸಚಿನ್ ಸುಭಾಸ್ ಗಬ್ಬೂರ್ (ಸಂಚಾಲಕರು ಹುಬ್ಬಳ್ಳಿ ಶಹರ ಘಟಕ) ಕರ್ಕಿ ಬಸವೇಶ್ವರ ನಗರ ಹುಬ್ಬಳ್ಳಿ.
2)ವಿಜಯ್ ಕರಿಯಪ್ಪ ಮೂಲಿಮನಿ (ಅಮರಗೋಳ,ನವನಗರ)
3) ಬಸವರಾಜ್ ವೀರುಪಾಕ್ಷಿ ಜುಮಾಲಾಪುರ (ಗಿರಿಣಿಚಾಳ ಹುಬ್ಬಳ್ಳಿ)
ಇವರನ್ನು ನೇಮಕಗೊಳಿಸಿ ಆದೇಶ ಪತ್ರವನ್ನು ನೀಡಲಾಗಿದೆ ಎಂದು ಕ.ದ.ಸಂ.ಸ ಜಿಲ್ಲಾ ಸಂಚಾಲಕರಾದ ಡಾ.ವಿಜಯ್ ಎಮ್ ಗುಂಟ್ರಾಳ ಪದಾಧಿಕಾರಿಗಳಾದ ಮಲ್ಲೇಶ್ ಬೆಳಗಲಿ, ಗೋವಿಂದ್ ವಾಲಿಕಾರ,ಮಾರುತಿ ಕಟ್ಟಿಮನಿ, ಗಾಳೆಪ್ಪಾ ದ್ವಾಸಲಕೇರಿ, ಸೇರಿದಂತೆ ನೂರಾರು ಯುವಕರು ಸಭೆಯಲ್ಲಿ ಉಪಸ್ಥಿತರಿದ್ದರು.