ಆಮ್ ಆದ್ಮಿ ಪಕ್ಷದಿಂದ ಪಾಲಿಕೆ ಆಯುಕ್ತರಿಗೆ ಮನವಿ!
ಹುಬ್ಬಳ್ಳಿ: ಮಳೆಗಾಲ ಬಂದರೆ ಸಾಕು ಅವಳಿನಗರದ ಕೆಲವು ಪ್ರದೇಶ ಗಳ ಜನರು ಮಳೆಗಾಲ ಮುಗಿಯೊ ವರೆಗೂ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದೆ ಹಾಕಿದ್ದು.
ಆದರೂ ಸಹ ಬಡವನ ಕೋಪ ದವಡೆಗೆ ಮೂಲವೆಂಬಂತೆ ಎಲ್ಲ ತೊಂದರೆಗಳನ್ನು ಸಹಿಸಿಕೊಂಡೆ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಇವತ್ತು ಅಸಹಾಯಕ ಬಡವರ ಧ್ವನಿಯಾಗಿ ನಿಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಳೆಹುಬ್ಬಳ್ಳಿ ಭಾಗದ ಪಾಲಿಕೆ ಸಂಖ್ಯೆ 72 ಮತ್ತು 73ರ ನೇಕಾರ ನಗರದ ಬೇಪಾರಿ ಪ್ಲಾಟ್ ಮತ್ತು ವಾಣಿ ಪ್ಲಾಟ್ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ಇಲ್ಲರುವ ಸಮಸ್ಯಗಳು ಒಂದೊ ಎರಡೊ ಆಗಿದ್ರೆ ಸುಮ್ಮನಾಗಬಹುದಿತ್ತು.
ಆದ್ರೆ ಇಲ್ಲಿರುವ ಸಮಸ್ಯೆಗಳು ಮಾತ್ರ ಇಲ್ಲೀನ ಜನರ ನೆಮ್ಮದಿಯನ್ನೆ ಹಾಳು ಮಾಡಿದೆ. ಇಲ್ಲಿ ಸ್ವಚ್ಚತೆಯಿಂದ ಹಿಡಿದು ಒಳಚರಂಡಿಗಳು ತುಂಬಿ ಹೋಗಿದ್ದು ದುರ್ವಾಸನೆ ಗೆ ಮನೆಯಿಂದ ಹೊರಬರದಂತಹ ಸ್ಥಿತಿ ಎದುರಾಗಿದೆ. ಅಂಗವಿಕಲರು, ಶಾಲಾ ಮಕ್ಕಳು ಮಾತ್ರ ಇನ್ನಿಲ್ಲದ ತೊಂದ್ರೆ ಅನುಭವಿಸುತ್ತಿದ್ದು ಕೂಡಲೇ ಪಾಲಿಕೆ ಆಯುಕ್ತರು ಈ ಭಾಗದ ಜನರ ಸಮಸ್ಯಗೆ ಸ್ಪಂದಿಸ ಬೇಕೆಂದು ಆಮ್ ಆದ್ಮಿ ಪಕ್ಷದ ಅನಂತಕುಮಾರ ಬುಗಡಿ ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ, ಇವರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರನ್ನು ಭೇಟಿಯಾಗಿ ಅವ್ಯವಸ್ಥೆಯನ್ನು ಸರಿಪಡಿಸಲು ಮನವಿ ಸಲ್ಲಿಸಿದರು.
ಇದೆ ವೇಳೆ ಪಕ್ಷದ ಕಾರ್ಯಕರ್ತರಾದ, ಭಾಷಾ ಹುಸೇನ್ ತಲೆವಾಡ, ಮಲ್ಲಪ್ಪಾ ತಡಸದ, ರೇವಣಸಿದ್ದಪ್ಪ ಹುಬ್ಬಳ್ಳಿ, ಶಶಿಕುಮಾರ ಸುಳ್ಳದ, ಹಸನ್ ಇನಾಮದಾರ, ವಿಶ್ವನಾಥ ಕರಡಿಗುಡ್ಡ, ಕುಮಾರ ನೂಲ್ವಿ, ಶ್ರೀರಂಗ ಮುತಾಲಿಕ ದೇಸಾಯಿ, A B ಬಿರಾದಾರ. ಮುಂತಾದವರು ಇದ್ದರು.