ಇದು ನೆಪ ಮಾತ್ರಕ್ಕೆ ಅಕ್ರಮ ಮರಳು ಅಡ್ಡೆಗಳ ಮೇಲಿನ ದಾಳಿಯೆ?
ಧಾರವಾ ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಣಿಕೆ ಹಾಗೂ ದಾಸ್ತಾನುಗಳು ನಾಯಿ ಕೊಡೆ ಗಳಂತೆ ತಲೆ ಎತ್ತಿ ನಿಂತಿವೆ. ಇದರ ಮಧ್ಯೆಯೆ ಶುಕ್ರವಾರ ಹುಬ್ಬಳ್ಳಿಯ ಕೆಲವು ಮರಳು ಫಿಲ್ಟರ್ ಮಾಡುವ ಅಡ್ಡೆಗಳ ಮೆಲೆ ಮೈನ್ಸ್ ಅ್ಯಂಡ್ ಜಿಯೊಲಜಿ ಅಧಿಕಾರಿಗಳು ಅಕ್ರಮ ಮರಳು ದಾಸ್ತಾನು ಗಳ ಮೆಲೆ ದಾಳಿ ನಡೆಸಿ ಮೂರು ಟ್ರಕ್ ಹಾಗೂ ಒಂದು ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಆದ್ರೆ ಮೈನ್ಸ್ ಆ್ಯಂಡ್ ಜಿಯೊಲಜಿ ಅಧಿಕಾರಿಗಳು ಮಾತ್ರ ಮೈ ಕೊಡವಿ ಕರ್ತವ್ಯಕ್ಕೆ ಮುಂದಾಗಿದ್ದಾರೆ.ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆಸಿದ ದಾಳಿಯ ವೇಳೆ ಸಿಕ್ಕಿರುವ ಅನುಮತಿ ಇಲ್ಲದ ಉಸುಕಿನ ಟ್ರಕ್ ಗಳಿಗೆ ಸಹಾಯವಾಗಲೆಂದು ಮಂತ್ಲಿ ಪಡೆಯುತ್ತಿರುವ. ಇಲಾಖೆಯ ಕೆಲ ಮಂಡ ಸಿಬ್ಬಂದಿಗಳು ದಂಧೆಕೊರರಿಗೆ ನಕಲಿ ಅನಮತಿ ಪತ್ರ ತಯಾರಿಸಿಕೊಳ್ಳುವ ಕಾನೂನು ಬಾಹಿರ ಐಡಿಯಾಗಳನ್ನ ನೀಡುತ್ತಿದ್ದಾರಂತೆ. ಇಷ್ಟೇ ಅಲ್ಲದೆ ಇಂತಹ ಅಕ್ರಮ ಧಂದೆ ಗೆ ಮಠದ ಆವರಣವು ಹೊರತಾಗಿಲ್ಲ.ಬುದ್ದಿ ಹೇಳಿ ಸನ್ಮಾರ್ಗದಲ್ಲಿ ನಡೆಸಬೆಕಿದ್ದ ಸ್ವಾಮಿಗಳೆ ಮಾಮೂಲಿಗೆ ನಿಂತ್ರಾ? ಎನ್ನುವ ಮಾಹಿತಿಯನ್ನ ಅತಿಶಿಘ್ರವಾಗಿ ಪವರ್ ಸಿಟಿ ನ್ಯೂಸ್ ಸುದ್ದಿ ಬಯಲು ಮಾಡಲಿದೆ.
ಆದ್ರೆ ಇ ದಾಳಿ ಕೇವಲ ಹುಬ್ಬಳ್ಳಿಯಲ್ಲಿ ಮಾತ್ರ ಕಾಟಚಾರಕ್ಕೆ ಎಂಬಂತಿದಿಯೋ ಅಥವಾ ಧಾರವಾಡ ಜಿಲ್ಲೆಯ. ಬಹುತೇಕ ತಾಲೂಕು ವ್ಯಾಪ್ತಿಗಳಲ್ಲಿ ಸಂಪೂರ್ಣ ಕರ್ಮ ಕಾಂಡ ಬಯಲಿಗೆಳೆದ ಮೇಲೆಯೆ ಕಾರ್ಯ ಪ್ರವೃತ್ತರಾಗ್ತಾರಾ ಅಧಿಕಾರಿಗಳು ಎನ್ನುವುದೆ ಜೀವಂತ ಪ್ರಶ್ನೆ.
ಧಾರವಾಢದ ನಗರ ಪ್ರದೇಶ, ನವಲಗುಂದ ,ಅಣ್ಣಿಗೇರಿ,ಕಲಘಟಗಿ,ಕುಂದಗೋಳ ಸೇರಿದಂತೆ ಅಕ್ರಮ ಮರಳು ದಂಧೆ ಬಲು ಜೋರಾಗಿದೆ.
ಆದರೆ ಸರಕಾರ ನಿರ್ದೇಶಿಸಿರುವ ಟಾಸ್ಕ ಫೊರ್ಸ್ ಅಧಿಕಾರಿಗಳು ಎಲ್ಲಿ ಅಂತಾ ಜಿಲ್ಲಾಧಿಕಾರಿಗಳೆ ಉತ್ತರಿಸಬೇಕಿದೆ.