ಭೂಮಿ ಯೋಜನೆ ಅನುಷ್ಠಾನ; ರಾಜ್ಯಕ್ಕೆ ನವಲಗುಂದ ಪ್ರಥಮ, ಹುಬ್ಬಳ್ಳಿ ದ್ವಿತೀಯ!
ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) ಜೂ. 9:
ಭೂಮಿ ಯೋಜನೆಯಡಿ 2022ರ ಏಪ್ರೀಲ್ ತಿಂಗಳಿನಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿದ ನವಲಗುಂದ ತಾಲೂಕು ರಾಜ್ಯಕ್ಕೆ ಪ್ರಥಮ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಭೂ ಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಮತ್ತು ಯುಪಿಓಆರ್ ಪದನಿಮಿತ್ತ ನಿರ್ದೇಶಕರಾದ ಮುನೀಶ್ ಮೌದ್ಗೀಲ್ ಅವರು ಅಭಿನಂದಿಸಿದ್ದಾರೆ.
ನವಲಗುಂದ ತಹಶೀಲ್ದಾರ ಅನಿಲ ಬಡಿಗೇರ ಮತ್ತು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಅವರಿಗೆ ಅರೆ ಸರ್ಕಾರಿ ಪತ್ರ ( D.O.Letter) ಬರೆದಿರುವ ಅವರು,
ನವಲಗುಂದ ತಾಲೂಕಿನಲ್ಲಿ
ಭೂಮಿ ಯೋಜನೆಯಡಿ 2022ರ ಏಪ್ರೀಲ್ ತಿಂಗಳಿನಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ, 4.72 ಸಿಗ್ಮಾ ಮೌಲ್ಯ ಹಾಗೂ 4.257 ರಷ್ಟು ವಿಲೇವಾರಿ ಸೂಚ್ಯಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ.
ಹುಬ್ಬಳ್ಳಿ ಗ್ರಾಮೀಣ ತಾಲೂಕು 5.56 ಸಿಗ್ಮಾ ಮೌಲ್ಯ ಹಾಗೂ 3.947 ರಷ್ಟು ವಿಲೇವಾರಿ ಸೂಚ್ಯಂಕವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದೆ.
ಈ ಸಾಧನೆಗೆ ನವಲಗುಂದ ಮತ್ತು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯತತ್ಪರತೆ ಕಾರಣವಾಗಿದೆ,ಬರುವ ದಿನಗಳಲ್ಲಿಯೂ ಇದೇ ಉತ್ಸಾಹ ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಮುನೀಶ್ ಮೌದ್ಗಿಲ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.