ಮೊದಲ ಸಭೆಯಲ್ಲಿಯೇ ಅವಳಿನಗರದ ಸಮಸ್ಯೆಗೆ ಡೆಡಲೈನ್ ಫೀಕ್ಸ ಮಾಡಿದ ನಾಯಕ
ಧಾರವಾಡ
ಇಂದು ಧಾರವಾಡದ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಅವಳಿನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಪಾಲಿಕೆ ವಾಟರ್ ಬೋರ್ಡ ಕೆಯುಡಿಎಫಸಿ ಹಾಗು ಎಲ್ & ಟಿ ಕಂಪನಿಯ ಅಧಿಕಾರಿಗಳೊಂದಿಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಪಾಲಿಕೆ ಅಯುಕ್ತರು ಉಪಸ್ಥಿತಿಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ L&T ಅಧಿಕಾರಿಗಳಿಗೆ ಮಹಾಪೌರರು ಈ ಕೆಳಗಿನ ಕಾರ್ಯನಿರ್ವಹಣೆಗಳ ಸೂಚನೆಗಳನ್ನು ನೀಡಿದರು.
ಧಾರವಾಡದ ಎಲ್ಲಾ ಬೋರವೆಲಗಳನ್ನ ಹತ್ತು ದಿನಗಳಲ್ಲಿ ನಗರದ ಎಲ್ಲಾ ಬೋರವೆಲಗಳ ರಿಪೇರಿ ಮಾಡಿ ಕಾರ್ಯ ನಿರ್ವಹಿಸಬೇಕು.
ಅವಳಿನಗರದ ಪಾಲಿಕೆ ಸದಸ್ಯರು ಪಾಲಿಕೆ ಅಧಿಕಾರಿಗಳು ವಾಟರ ಬೋರ್ಡ ಕೆಯುಡಿಎಫಸಿ ಅಧಿಕಾರಿಗಳು L&T company ಅಧಿಕಾರಿಗಳ ವಾಟ್ಸಾಪ ಗ್ರುಫ್ ರಚನೆಯಾಗಿ ಯಾವುದೇ ವಾರ್ಡಿನ ನೀರಿನ ಸಮಸ್ಯೆ ಕ್ಷಿಪ್ರವಾಗಿ ಪರಿಹರಿಸಬೇಕು.
ಮಹಾನಗರ ಪಾಲಿಕೆ ಸದಸ್ಯರ ಮೋಬೈಲ್ ಸಂಖ್ಯೆಗಳನ್ನು ತಮ್ಮಲ್ಲಿ ಸಂಗ್ರಹಿಸಿ ಅವರ ಕರೆಗಳಿಗೆ ತುರ್ತಾಗಿ ಸ್ಪಂದಿಸಲು ಸೂಚಿಸಲಾಯಿತು.
ಎಲ್ &ಟಿ ಅಧಿಕಾರಿಗಳು ಅವಳಿನಗರದಲ್ಲಿ ಯಾವ ರೀತಿ ಕಾರ್ಯ ನಿರ್ವಹಣೆ ಮಾಡುತ್ತಾರೆ ಹಾಗೂ ಜನಸ್ಪಂದನ ಮಾಡುವ ವಿಧಾನಗಳನ್ನ ಹದಿನೈದು ದಿನಗಳಲ್ಲಿ ಪಾವರಪಾಯಿಂಟ ಪ್ರೆಸೆಂಟೇಶನ ನೀಡಿ ಯಾವುದೇ ಗೊಂದಲಗಳಿಗೂ ಆಸ್ಪದ ನೀಡದ ರೀತಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಹಾಗು ನೀರಿನ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಸಲಹೆ ಸೂಚನೆಗಳನ್ನು ನೀಡಿ ಕ್ಷಿಪ್ರ ಗತಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು.