ಇಬ್ಬರ ಪತ್ರಕರ್ತರ ಅಕಾಲಿಕ ಸಾವು ಕಂಬನಿ ಮಿಡಿದ ಪತ್ರಕರ್ತರ ಸಂಘ
ಬೆಂಗಳೂರು
ಪತ್ರಕರ್ತರಾದವರಿಗೆ ನಮಗೆಲ್ಲಾ ನೋವಿನ 2 ಸಂಗತಿಗಳು ಇವು.
ವಿಜಯ ಕರ್ನಾಟಕ ಡಿಸೈನರ್
ಸೂರ್ಯಕುಮಾರ್ (29)
ನಿನ್ನೆ ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಪತ್ನಿ, ತಂದೆ ತಾಯಿ ಮತ್ತು ಸಹೋದರಿಯರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.
ಈ ಹಿಂದೆ ವಿಜಯವಾಣಿ ಮತ್ತು ಸಿನಿಮಾ ಮಾಸಿಕಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದರು.
ಮಂಡ್ಯ ಜಿಲ್ಲೆಯ ಬಸರಾಳ ಹತ್ತೀರದ ಗಿಡ್ಡೇಗೌಡನ ಕೊಪ್ಪಲಿನ ಸೂರ್ಯ ಕುಮಾರ್ ಸಾವು ನಿಜಕ್ಕೂ ಅರಗಿಸಿಕೊಳ್ಳಲಾರದ ಸಂಗತಿ.
ಇನ್ನು ಸೂರ್ಯಕುಮಾರ್ ಸಾವಿನ ವಿಷಯ ಮಾತನಾಡುತ್ತಿರುವ ಸಂದರ್ಭದಲ್ಲಿ ಕನ್ನಡ ಪ್ರಭ ಪತ್ರಿಕೆ ಉಪಸಂಪಾದಕ ಹರೀಶ್ ಹುಲಿಕಟ್ಟೆ (29) ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.
ಪತ್ನಿ, ಕುಟುಂಬ, ಸ್ನೇಹಿತರನ್ನು ಅಗಲಿದ್ದಾರೆ.
ಇಬ್ಬರು ಇನ್ನೂ ಚಿರಯುವಕರು. ಬದುಕಿ ಬಾಳಬೇಕಾದವರು ಇಷ್ಟು ಬೇಗ ಮೃತಪಟ್ಟರೆ ಏನು ಹೇಳುವುದು?
ಇಬ್ಬರು ಪತ್ರಕರ್ತರ ಸಾವಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಂಬನಿ ಮಿಡಿದಿದ್ದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಇಬ್ಬರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಧಾರವಾಡ ಮೀಡಿಯಾ ಕ್ಲಬ್, ಹಾಗೂ ಪ್ರೇಸ್ ಗೀಲ್ಡ್, ಕಂಬನಿ ಮಿಡಿದಿದೆ