“ಕೈ” ಗೆ ಪರ್ಸೆಂಟೆಜ್ ಕೊಟ್ಟ ಕೈ ಮುಖಂಡ!
ಹುಬ್ಬಳ್ಳಿ
ಧಾರವಾಡ ಜಿಲ್ಲಾ ಕಾಂಗ್ರೇಸ್ ಪದಾದಿಕಾರಿಗಳಲ್ಲಿ ಸ್ಥಾನ ಅಲಂಕರಿಸಿರುವ ಇವರ ವರ್ಚಸ್ಸು ಯಾವು ರಾಜ್ಯ ನಾಯಕರಿಗಿಂತಲೂ ಕಡಿಮೆ ಇಲ್ಲ. ವ್ಯವಹಾರ ಕೂಡ ಅಷ್ಟೇ ಸ್ಟ್ರಾಂಗ್. ಒಂದು ಕಡೆ ಆಹಾರ ಸರಬರಾಜಿನ ವ್ಯವಸ್ಥೆ ಮತ್ತೊಂದು ಮೊಗೊದೊಂದು ವಹಿವಾಟು ಕೂಡ ಹೊಂದಿರೋದು ಅಷ್ಟೇ ನೈಜ ಸಂಗತಿ. ಆದ್ರೆ ಖುದ್ದು ಇವರೆ ಹೇಳುವುದೆನೆಂದರೆ ಕೈ ಪಕ್ಷದ ಶಾಸಕರೊಬ್ಬರು ಟೆಂಡರ್ ಖಾಯಂ ಗೊಳಿಸುವ ವಿಚಾರವಾಗಿ “ಪರ್ಸೆಂಟೆಜ್” ಗೆ ಬೇಡಿಕೆ ಇಟ್ಟಿದರ ಪೈಕಿ ಆಗಲೆ ಲಕ್ಷ ಗಟ್ಟಲೆ ರೋಖಡಾ ಕೊಟ್ಟು ಕೈ ಸುಟ್ಟಿಕೊಂಡಿದ್ದಾರಂತೆ.
ಪರಿಣಾಮ ಇತ್ತ ಕೊಟ್ಟಿರುವ ಲಕ್ಷಾಂತರ ರೂ. ಹಣ ಮತ್ತು ವ್ಯವಹಾರ ಎರಡನ್ನೂ ನುಂಗಿದ್ದಾರಂತೆ ಆ ಶಾಸಕರು.
ಹೀಗಾಗಿ ಮತ್ತೋಮ್ಮೆ ಟ್ರೈ ಮಾಡಿರುವ ಕಾಂಗ್ರೇಸ್ ಮುಖಂಡನಿಗೆ ಶಾಸಕರು “ಪರ್ಸೆಂಟೆಜ್” ಜಾಸ್ತಿ ಮಾಡಿದ್ರೆ ಮಾತ್ರ ನಿಮಗೆ ನಮ್ಮ ಕ್ಷೇತ್ರದಲ್ಲಿ ಅವಕಾಶ ಕೊಡ್ತಿನಿ ಎನ್ನುವ ಖಂಡಿಷನ್ ಇಟ್ಟಿದ್ದರಂತೆ.
ಅದರಂತೆ ಈ ಮುಖಂಡ ತಿಂಗಳಿಗೆ ೧೦% ನಂತೆ ಮೂರು ತಿಂಗಳ ವರೆಗೂ ನೀಡಿದ್ದರಂತೆ. ಇದರ ಕುರಿತಾದ ಧ್ವನಿ ಮುದ್ರಿಕೆಯು ದಾಖಲೆಗಳು ಇದೆಯಂತೆ.ಆದ್ರೆ ಆ ಶಾಸಕರು ಹೇಳ್ತಾರೆ ಇವನೊಬ್ಬ ಬ್ಲ್ಯಾಕ್ ಮೇಲರ್ ಇವನು “ಅದೇನ ಮಾಡ್ಕೋತಾನೊ ಮಾಡ್ಕೋಳ್ಲಿ” ಅವನ ಹತ್ರ ಸಾಕ್ಷಿ ಇದ್ರೆ ಬಹಿರಂಗ ಪಡಿಸ್ಲಿ ಎಂದು ನೇರ ವಾಗಿ ಸವಾಲೆಸಿದಿದ್ದಾರೆ.
ಸದ್ಯಕ್ಕೆ ಅವಳಿನಗರದ ಕಾಂಗ್ರೇಸ್ ನಲ್ಲೂ “ಪರ್ಸೆಂಟೆಜ್” ವಿಷಯದ ಕುರಿತಾದ ದಾಖಲೆ “ಪವರ್ ಸಿಟಿ ನ್ಯೂಸ್” ಅತಿ ಶೀಘ್ರದಲ್ಲಿ ಪ್ರಕಟಿಸುವುದು ಕೂಡ ಅಷ್ಟೇ ಸತ್ಯ.