ಸ್ಥಳೀಯ ಸುದ್ದಿ
ಭಾರಿ ಗಾಳಿ ಮಳೆಗೆ ಬಿದ್ದ ಮರ ಸಂಚಾರ ಅಸ್ತವ್ಯಸ್ಥ
ಧಾರವಾಡ
ಧಾರವಾಡ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರದ ಹೊರವಲಯದಲ್ಲಿರುವ ಕಮಲಾಪೂರ ರಸ್ತೆಯಲ್ಲಿ ಪತ್ರೇಪ್ಪಜ್ಜನ ಮಠದ ಮುಂದೆ ಮರವೊಂದು ಬಿದ್ದಿದೆ.
ಮರಬಿದ್ದ ಪರಿಣಾಮ ವಾಹನಗಳು ಜಖಂವಾಗಿವೆ.
ವಿದ್ಯುತ್ ತಂತಿಗಳು ಹರಿದು ಬಿದ್ದಿವೆ.
ಇದೇ ರಸ್ತೆಯ ಮೇಲೆ ಹಾದು ಹೋಗುವ ವಾಹನಗಳಿಗೆ ಸಂಚಾರಕ್ಕೆ ಅಡಚಣೆಯಾಗಿದೆ.
ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿದ್ದು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ..