ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಕೇಂದ್ರ ಸಚಿವರು
ಧಾರವಾಡ
ಇಂದು ಧಾರವಾಡದಲ್ಲಿ ವಾರ್ಡ ಸಂಖ್ಯೆ3ರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಭೂಮಿಪೂಜೆಗಾಗಿ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿಯವರು ಹಾಗು ಧಾರವಾಡ ಶಾಸಕರು ಅಮೃತ ದೇಸಾಯಿಯವರ ಹಾಗು ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಜರುಗಿದವು.
ಸುಮಾರು ಹತ್ತು ಕೋಟಿ ರೂಪಾಯಿಗಳ ಅನುದಾನದ ಕಾಮಗಾರಿ ಭೂಮಿಪೂಜೆ ಈ ಕೆಳಗಿನ ಸ್ಥಳದಲ್ಲಿ ಜರುಗಿದವು.
ಕಾಮಗಾರಿ 1
ಮಧ್ಯಾಹ್ನ ಸೈದಾಪುರ ಕಲ್ಮೇಶ್ವರ ದೇವಾಲಯದಿಂದ ಮರಾಠಾ ಕಾಲೊನಿವರೆಗು ರಸ್ತೆ ಭೂಮಿ ಪೂಜೆ..
ಕಾಮಗಾರಿ 2
ಗಂಟೆಗೆ ಕಮಲಾಪುರ ಮುಖ್ಯರಸ್ತೆ ಧಾರವಾಡ ನಗರ ಪ್ರವೇಶ ಕಮಾನು ಶ್ರೀ ಪತ್ರೇಶ್ವರ ಅಜ್ಜನವರ ಮಹಾದ್ವಾರ
ನಿರ್ಮಾಣ ಭೂಮಿಪೂಜೆ.
ಕಾಮಗಾರಿ 3
ಡಾ ರಾಮನಗೌಡರ ಆಸ್ಪತ್ರೆಯಿಂದ ಕಮಲಾಪುರವರೆಗೆ ರಾಜಕಾಲುವೆ ನಿರ್ಮಾಣ ಭೂಮಿಪೂಜೆ
ಕಾಮಗಾರಿ 4
ಸೈದಾಪುರ ಕಾಲೊನಿ ಹಾದಿಮನಿ ಅವರ ಮನೆ ಬೆಳ್ಳಕ್ಕಿ ಅವರ ಮನೆ ಮಾಳಾಪುರ ಮುಖ್ಯರಸ್ತೆ ಭೂಮಿಪೂಜೆ
ಕಾಮಗಾರಿ 5
ಮಾಳಾಪುರದಿಂದ ಎತ್ತಿನಗುಡ್ಡ ವರೆಗಿನ ತೆರೆದ ಚರಂಡಿ ನಿರ್ಮಾಣ ಭೂಮಿಪೂಜೆ
ಕಾಮಗಾರಿ,6
ಕಮಲಾಪೂರ ಯಾದವಾಡ ಮುಖ್ಯ ರಸ್ತೆ ಯಿಂದ ಪತ್ರೇಶ್ವರ ನಗರ ಹೊಗುವ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳು ಭೂಮಿ ಪೂಜೆ
ಭೂಮಿಪೂಜೆ ಕಾರ್ಯಗಳು ಜರುಗಿದವು.
ಈ ಸಂದರ್ಭದಲ್ಲಿ ಈ ಭಾಗದ ಸ್ಥಳಿಯರು ರೈತರು ತಮ್ಮಬೇಡಿಕೆಗಳ ಮನವಿ ಪತ್ರಗಳನ್ನು ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು ಹಾಗು ಶಾಸಕರು ಅಮೃತ ದೇಸಾಯಿಯವರಿಗೆ ನೀಡಿ ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು ಹಾಗು ಇದೆ ಸಂದರ್ಭದಲ್ಲಿ ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು ಶಾಸಕರು ಅಮೃತ ದೇಸಾಯಿಯವರು ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ ಅವರನ್ನ ಸ್ಥಳಿಯ ಗುರುಹಿರಿಯರು ಹಾಗು ವಿವಿಧ ಯುವಕಮಂಡಳ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಿಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ತವನಪ್ಪ ಅಷ್ಟಗಿ ಸೀಮಾ ಮಸೂತಿ ಸುರೇಶ ಬೆದರೆ ಮಂಜು ಬಟ್ಟಣ್ಣವರ ಸುನೀಲಮೋರೆ ಶ್ರೀನಿವಾಸ ಕೋಟ್ಯಾನ ಮೋಹನ ರಾಮದುರ್ಗ ಟಿ ಎಸ ಪಾಟೀಲ ರಾಜು ಕಮತಿ ನಿತಿನ ಇಂಡಿ ಸಿದ್ದು ಕಲ್ಯಾಣಶೆಟ್ಟಿ ಬಸವರಾಜ ಪಳೋಟಿ ಸಿ ಎಸ ಪಾಟೀಲ ಡಾ ಎಸ ಅರ ರಾಮನಗೌಡರ ಅಮರ ಟಿಕಾರೆ ಶ್ರೀಕಾಂತ್ ರಾಶಿನಕರ ವೀರೇಶ ಹಿರೇಮಠ ರಾಜೇಶ್ವರಿ ಅಳಗವಾಡಿ ಶೇಕು ಕವಳಿ ಬಸು ಬಾಳಗಿ ರಮೇಶ ತಳಗೇರಿ ರಾಜು ಮಟ್ಟಿ ನಿರ್ಮಲಾ ಕನಿನಾಯ್ಕರ ಹಾಗು ಸ್ಥಳೀಯರು ಉಪಸ್ಥಿತರಿದ್ದರು