ಹಿಜಾಬ್ ವಿಚಾರ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು
ಬೆಂಗಳೂರು
ಹಿಜಾಬ್ ವಿಚಾರವಾಗಿ ಇಂದು ಹೈಕೋರ್ಟ್ ತೀರ್ಪು ಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದವು.
ಅವುಗಳನ್ನು ಪವರ್ ಸಿಟಿನ್ಯೂಸ್ ಕನ್ನಡ ನಿಮಗೆ ತಿಳಿಸುವ ಕೆಲಸ ಮಾಡ್ತಾ ಇದೆ.
ಹಿಜಾಬ್ ವಿಚಾರವಾಗಿ
ಹೈಕೋರ್ಟ್ ನ ತೀರ್ಪು ಬರುತ್ತಿದ್ದಂತೆ,
ಶ್ರೀರಾಮಸೇನೆ ಸಂಸ್ಥಾಪಕ ಶ್ರೀ ಪ್ರಮೋದ ಮುತಾಲೀಕ ಮಾತನಾಡಿ, ಹೈಕೋರ್ಟ ಹಿಜಾಬ್ ಕುರಿತಾಗಿ ನೀಡಿದ ತೀರ್ಪು ಅತ್ಯಂತ ಸ್ವಾಗತಾರ್ಹ.
ಇದು ಅತ್ಯಂತ ಐತಿಹಾಸಿಕವಾಗಿದೆ.
ಇದು ಸಂವಿಧಾನದ ವಿಜಯ.
ಸಂವಿಧಾನದ ಬದ್ಧವಾದ ಸರ್ಕಾರದ ಆದೇಶವನ್ನು ಹೈಕೋರ್ಟ ಎತ್ತಿ ಹಿಡಿದಿದೆ.
ಶಾಲಾ ಕಾಲೇಜ್ ಗೆ ಹಿಜಾಬ್ ಪ್ರವೇಶ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ.
ಸಮವಸ್ತ್ರ ಅಂದರೆ ಸಮವಸ್ತ್ರವೇ.
ಕೇಸರಿ ಶಾಲು, ಹಿಜಾಬ್‌ಗೆ ಅವಕಾಶ ಇಲ್ಲ ಅಂತಾ ಸಾಮಾನ್ಯರಿಗೂ ಗೊತ್ತಿತ್ತು.
ಆದರೂ ವಿವಾದ ಮಾಡಿದ್ದರು ಸಹಿತ ಕೆಲವರಿಗೆ ಮುಖಕ್ಕೆ ಹೊಡೆದಂತೆ ಆದೇಶ ಆಗಿದೆ.
ಇದನ್ನು ಮುಸ್ಲಿಂರು ಪಾಲಿಸಬೇಕು.
ಮಧ್ಯಂತರ ಆದೇಶ ಬಂದಾಗ ಪಾಲಿಸಿರಲಿಲ್ಲ.
ಈಗ ಪಾಲಿಸಲೇ ಬೇಕು ಎಂದರು.
ಹೈಕೋರ್ಟ್ ಗೆ ಹೋದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಬರುವಂತೆ ಹೇಳಿರುವ ಉಡುಪಿ ಶಾಸಕ ರಘುಪತಿ ಭಟ್ ಅವರ ಕಾರ್ಯ ಶ್ಲಾಘನೀಯವಾದದ್ದು.
ಸುಪ್ರೀಂಕೋರ್ಟ್ ಗೆ ಹೋಗುವವರು ಮೇಲ್ಮನವಿ ಸಲ್ಲಿಸಬಹುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ ಎಂದು ಮುತಾಲೀಕ ತಿಳಿಸಿದ್ರು.
ಇನ್ನು ಈ ಬಗ್ಗೆ ಹೈಕೋರ್ಟ್ ಮೊರೆ ಹೋದ
ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿ,
ನಮ್ಮ ಹಿಜಾಬ್ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ ಎಂದರು.
ನಮ್ಮ ಸಂವಿಧಾನ ಹಕ್ಕಿಗಾಗಿ ಹೋರಾಡುತ್ತೇವೆ.
ನಾವು ನಮ್ಮ ಕುರಾನ್ ಫಾಲೋ ಮಾಡುತ್ತೇವೆ.
ನಾವು ಸರಕಾರ, ಆದೇಶ ಅನುಸರಿಸಬೇಕಾಗಿಲ್ಲ.
ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು.
ನಾವು ಎರಡು ತಿಂಗಳು ಮನೆಯಲ್ಲೇ ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿದ್ರು.
ನಾವು ಕಾಂಪ್ರಮೈಸ್ ಮಾಡಲ್ಲ.
ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ.
ನಾವು ಹೈಕೋರ್ಟ್ ಗೆ ಹಿಜಾಬ್ ಗಾಗಿ ಹೋದೆವು
ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ.
ಸರಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಲ್ಲೇ ಪ್ರಕಟಿಸಲಾಗಿದೆ.
ನಾವು ಹಿಜಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ.
ನಮಗೆ ಇಂದು ಅನ್ಯಾಯವಾಗಿದೆ.
ನಾವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು.
ನಮ್ಮ ದೇಶದಲ್ಲೇ ನಮಗೆ ಅನ್ಯಾಯ ಆಗಿದೆ ಎಂದು ಅನ್ನಿಸುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ,
ಹಿಜಾಬ್ ಬಗ್ಗೆ ಕೋರ್ಟ್ ಕೊಟ್ಟಿರುವ ತೀರ್ಪನ್ನು ಸಂತೋಷದಿಂದ ಸ್ವಾಗತಿಸುತ್ತೇನೆ.
ಪ್ರಚೋದನೆ ನೀಡಿದವರು ಗಮನಿಸಿ ತಕ್ಷಣವೇ ಎಲ್ಲ ವಿದ್ಯಾರ್ಥಿನಿಯರು ಶಾಲೆಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
ಗೊಂದಲಗಳನ್ನು ಬಿಟ್ಟು ಶಾಲಾ ಕಾಲೇಜಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಈಶ್ವರಪ್ಪ ಕರೆ ನೀಡಿದ್ರು.
ಪ್ರಾಕ್ಟಿಕಲ್ ಎಕ್ಸಾಮ್ ಅನ್ನು ಕೆಲ ಮಕ್ಕಳು ತಪ್ಪಿಸಿಕೊಂಡಿದ್ದಾರೆ.
ಕೋರ್ಟ್ ನ ಮಧ್ಯಂತರ ತೀರ್ಪಿನ ಅನ್ವಯ ನಡೆದುಕೊಂಡಿದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತಿರಲಿಲ್ಲ.
ಸರ್ಕಾರ ಮುಸ್ಲಿಂ ಸಮುದಾಯದ ಮಕ್ಕಳಿಗೆ ಅನ್ಯಾಯವಾಗದ ರೀತಿ ಕ್ರಮ ಕೈಗೊಳ್ಳಲಿದೆ ಎಂದರು.
ಇದರ ಜೊತೆ- ಜೊತೆಗೆ ಯಾದಗಿರಿ ಜಿಲ್ಲೆಯಲ್ಲಿ
ಹಿಜಾಬ್ ವಿವಾದ ತೀರ್ಪು ಹಿನ್ನೆಲೆಯಲ್ಲಿ, ಕೆಂಭಾವಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ
ದ್ವೀತಿಯ ಪಿಯುಸಿ ಪೂರ್ವಭಾವಿಯ ಇಂಗ್ಲೀಷ ಪರೀಕ್ಷೆ ಬಿಟ್ಟು 8 ವಿದ್ಯಾರ್ಥಿಗಳು ಮನೆಗೆ ಹೋದ್ರು.
ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಿಜಾಬ್ ತೀರ್ಪು ವಿಚಾರವಾಗಿ,
ಕರ್ನಾಟಕದ ಹೈ ಕೋರ್ಟ್ ಹಿಜಬ್ ಬಗ್ಗೆ ಸ್ಪಷ್ಟವಾದ ತೀರ್ಪು ಕೊಟ್ಟಿದೆ.
ಸಾಕಷ್ಟು ವಿಚಾರಗಳು ಹೈ ಕೋರ್ಟ್ ನಲ್ಲಿ ಪರ ವಿರೋಧ ಚರ್ಚೆ ಆಯ್ತು.
ಇದರ ಬಗ್ಗೆ ರಸ್ತೆಯಲ್ಲಿ ಚರ್ಚೆ ಆಗಿದೆ.
ತೀರ್ಪಿಗೆ ತಲೆ ಬಾಗಿ ಶಿಕ್ಷಣಕ್ಕೆ ಒತ್ತು ಕೊಡಬೇಕು.
ಧರ್ಮದ ಚೌಕಟ್ಟಿನಲ್ಲಿ ಹಿಜಾಬ್ ಬರಲ್ಲ ಅಂತಾ ಹೇಳಿದೆ.
ಧರ್ಮಕ್ಕೆ ಮನೆಯಲ್ಲಿ ಗೌರವ ಕೊಟ್ಟು ಶಿಕ್ಷಣಕ್ಕೆ ಆದ್ಯತೆ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಈ ಎಲ್ಲಾ ಬೆಳವಣಿಗೆಗಳು ಪ್ರಮುಖವಾಗಿ ರಾಜ್ಯದಲ್ಲಿ ನಡೆದವು.
ಪವರ್ ಸಿಟಿ ನ್ಯೂಸ್ ಕನ್ನಡ ಸತ್ಯ ಸದಾಕಾಲ