ರಂಜಿತಾ ಎಸ್.ಕೆ ನ್ಯಾಯಾಧೀಶರಾಗಿ ಆಯ್ಕೆ
ಧಾರವಾಡ
ಹಾವೇರಿ ಜಿಲ್ಲೆಯ ಯಾಲಕ್ಕಿ ನಾಡಿನ ಮನೆ ಮಗಳು ರಂಜಿತಾ ಎಸ್.ಕೆ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಇವರ ತಂದೆ ಶ್ರೀ ಶೇಖರ ಎನ್.ಕರಬಸಮ್ಮನವರ್, ಹಾಗೂ ತಾಯಿ ಶ್ರೀಮತಿ ಮಂಜುಳಾ ಎಸ್.ಕರಬಸಮ್ಮನವರ್ .
ಮೈಸೂರಿನಲ್ಲಿ ಹೈಸ್ಕೂಲ್ ಮುಗಿಸಿ, ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಎಲ್.ಎಲ್.ಬಿ ಮುಗಿಸಿದ ಬಳಿಕ ಛತ್ತಿಸಗಡದ ರಾಯಪೂರದಲ್ಲಿ ಎಲ್.ಎಲ್.ಎಂ ಕೋರ್ಸ ಮುಗಿಸಿದ್ದಾರೆ.
ನಂತರ ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಅದಾದ ಬಳಿಕ ಹಿರಿಯ ವಕೀಲರಾದ ಪ್ರಕಾಶ ಎಸ್.ಉಡಿಕೇರಿ ಅವರ ಹತ್ತಿರ ಕಳೆದ 3 ವರ್ಷಗಳಿಂದ ಕಿರಿಯ ವಕೀಲರಾಗಿ ಕೆಲಸ ಮಾಡಿಕೊಂಡಿದ್ದಾರೆ.
ಧಾರವಾಡ ಖ್ಯಾತ
ಹಿರಿಯ ವಕೀಲರಾದ ಪ್ರಕಾಶ ಎಸ್.ಉಡಿಕೇರಿ ಅವರ ಹತ್ತಿರ ಎಲ್ಎಲ್ ಬಿ ಓದುತ್ತಿರುವಾಗಲೇ ಇಂಟರನಶಿಪ್ಗೆ ಬಂದು ಇಂದು ಸಾಧನೆಯ ಶಿಖರವೇರಿದ್ದಾರೆ.
ಸತತ 3 ವರ್ಷಗಳಿಂದ ಇವರು ಪ್ರಕಾಶ ಎಸ್.ಉಡಿಕೇರಿ ಅವರ ಹತ್ತಿರ ಕಾನೂನಿನ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದಾರೆ.
ಇತ್ತೀಚಿಗಷ್ಟೇ ಹಾವೇರಿ ಜಿಲ್ಲೆಯಲ್ಲಿ
10-12-2021 ರಂದು ಇವರ ಮದುವೆ ಬೆಂಗಳೂರಿನ ವಕೀಲರಾದ ರಾಜಕುಮಾರ ಎನ್ನುವರ ಜೋತೆಗೆ ನಡೆದಿದೆ.
ಹೈಕೋರ್ಟ ನಡೆಸುವ ಪ್ರಾಥಮಿಕ ಪರೀಕ್ಷೆ, ವೈವಾ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಇವರು ಉತ್ತೀರ್ಣರಾಗಿದ್ದಾರೆ.
ಶ್ರೀ ಸಾಯಿಬಾಬಾ ಅವರ ಭಕ್ತೆ ಆಗಿರುವ ರಂಜಿತಾ ಅವರಿಗೆ ಗುರುವಾರದ ದಿನವೇ ನ್ಯಾಯಾಧೀಶರಾಗಿರುವ ಸುದ್ದಿ ತಿಳಿದಿದ್ದು, ಸಾಯಿಬಾಬಾನ ಆರ್ಶೀವಾದವೇ ಸಿಕ್ಕಂತೆ ಆಗಿದೆ.
ಮನೆ ಮಗಳಂತೆ ಇರುವ ಯುವ ವಕೀಲರೊಬ್ಬರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ನಮ್ಮ ಟೀಂಗೆ ಹಾಗೂ ನನಗೆ ತುಂಬಾನೆ ಹೆಮ್ಮೆಯ ವಿಷಯ ಅಂತಾ, ರಂಜಿತಾ ಅವರ ಮಾರ್ಗದರ್ಶಕರಾದ ಹಿರಿಯ ವಕೀಲರಾದ ಪ್ರಕಾಶ ಎಸ್.ಉಡಿಕೇರಿ ಅವರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಪವರ್ ಸಿಟಿ ನ್ಯೂಸ್ ಕನ್ನಡದಿಂದಲೂ ಇವರಿಗೆ ತುಂಬು ಹೃದಯದ ಅಭಿನಂದನೆಗಳು…