ಧಾರವಾಡ

ಚೆನ್ನವೀರ ಕಣವಿ ಅವರ ವಯಸ್ಸು 94 ಅಲ್ಲಾ 96..

ಧಾರವಾಡ

ಹಿರಿಯ ಕವಿ. ಡಾ.ಚೆನ್ನವೀರ ಕಣವಿ ಅವರು ನಿಧನರಾಗಿ ಇಂದು 4 ದಿನಗಳು ಕಳೆದಿವೆ. ನಿನ್ನೆಯಷ್ಟೇ 3 ದಿನದ ಕಾರ್ಯವನ್ನು ಡಾ.ಚೆನ್ನವೀರ ಕಣವಿ ಅಜ್ಜನ ಮನೆಯಲ್ಲಿ ಮಾಡಲಾಗಿದೆ.


ಇಂದು ಧಾರವಾಡದ ಕಲ್ಯಾಣನಗರದಲ್ಲಿರುವ ನಾಡೋಜ ಡಾ.ಚೆನ್ನವೀರ ಕಣವಿ ಅವರ ಮನೆಗೆ ಮಾಜಿ ಸಿಎಂ, ಜಗದೀಶ ಶೆಟ್ಟರ್ ಹಾಗೂ ಕೈಮಗ್ಗ, ಜವಳಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಸಾತ್ವಾಂನ ಹಾಗೂ ಧೈರ್ಯ ಹೇಳಿದ್ರು.

ಮಧ್ಯಾಹ್ನದ ಹೊತ್ತಿಗೆ ಆಗಮಿಸಿದ್ದ ಇಬ್ಬರು ನಾಯಕರು, ಮೊದಲು ಡಾ.ಚೆನ್ನವೀರ ಕಣವಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ್ರು. ಸೆಷನ್​ ಇರುವ ಕಾರಣ ಅವರು ನಿಧನರಾದಾಗ ಬರಲಿಕ್ಕೆ ಆಗಲಿಲ್ಲಾ. ಸ್ಪೇಶಲ್​ ಪ್ಲೈಟ್​ ತರಬೇಕೆಂದ್ರು ಆಗಲಿಲ್ಲಾ ಕ್ಷಮಿಸಿ ಎಂದು ಕುಟುಂಬಸ್ಥರಲ್ಲಿ ಮನವಿ ಮಾಡಿದ್ರು.

ಈ ವೇಳೆ ಕಣವಿ ಅಜ್ಜನ ಬಗ್ಗೆ ಮಾಹಿತಿ ತಿಳಿಸಿದ ಅವರ ಹಿರಿಯ ಪುತ್ರ ನಮ್ಮ ಸಹೋದರ ಚಂದ್ರಮೌಳಿ ಕಣವಿ ಹೆಚ್ಚಾಗಿ ದೂರದರ್ಶನದಲ್ಲಿ ಕಂಡು ಬರ್ತಾರೆ ಅಂತಾ, ಸಹೋದರನ ಬಗ್ಗೆ ಮಾಹಿತಿ ನೀಡಿದ್ರು.

ನಮ್ಮ ತಂದೆ ಜನ್ಮ ದಿನಾಂಕ 1928 ಅಲ್ಲಾ, 1926, ಹೀಗಾಗಿ ಅವರಿಗೆ 96 ವರ್ಷ ನಡೆಯುತ್ತದೆ. ಶಾಲೆ ದಾಖಲಾತಿ ಸೇರಿಸುವಾಗ, ಅದು ಗೊಂದಲವಾಗಿದೆ ಎಂದು ಸದಾಕಾಲ ಹೇಳುತ್ತಾ ಇದ್ದರು, ಅತ್ಯಂತ ಸರಳ ರೀತಿಯಲ್ಲಿ ಜೀವನ ಮಾಡಿ ನಮಗೆಲ್ಲಾ ಮಾರ್ಗದರ್ಶನ ಮಾಡಿದ್ದವರು ನಮ್ಮ ತಂದೆ. ಅವರ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲಾದಾಗಿನಿಂದ ಹಿಡಿದು, ಅಂತ್ಯಕ್ರೀಯೆ ವರೆಗೂ ಸರ್ಕಾರ ಬಹಳ ಚೆನ್ನಾಗಿ ನಡೆದುಕೊಂಡಿದೆ ಎಂದು ಸರ್ಕಾರದ ಕಾರ್ಯವೈಖರಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು..

ತಂದೆ ವಯಸ್ಸು 94 ಅಲ್ಲಾ 96 ಎಂದು ಹೇಳಿದ ಕಣವಿ ಅಜ್ಜನ ಪುತ್ರ

ಪೋಸ್ಟ್ ಕಾರ್ಡ ಖರೀದಿ ಮಾಡುವ ಮೂಲಕ ಪೋಸ್ಟ್​ ಆಫೀಸ್​ಗೆ ಹೆಚ್ಚು ಹೋಗುತ್ತಿದ್ದರು ಕಣವಿ ಅಜ್ಜಾ ಹಾಗೂ ಕಲ್ಬುರ್ಗಿ ಸರ್ ಎಂದು ಮಗ ಅವರ ತಂದೆಯ ಬಗ್ಗೆ ನೆನಪು ಮಾಡಿಕೊಂಡರು.
ಇದೇ ವೇಳೆ ಜಗದೀಶ ಶೆಟ್ಟರ್​ ಮಾತನಾಡಿ, ಸಾಕಷ್ಟು ಕಾರ್ಯಕ್ರಮಗಳಿಗೆ ಪೂರ್ವತಯಾರಿಯಾಗಿ ಕಣವಿ ಅಜ್ಜನವರು ಬರ್ತಾ ಇದ್ದರು. ನಾವು ಬಹಳಷ್ಟು ನೋಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕಣವಿ ಅಜ್ಜನವರ ಸಹೋದರರು ಎಷ್ಟು, ಅವರೆಲ್ಲಾ ಈಗ ಹೇಗಿದ್ದಾರೆ ಎಂದು ಕುಟುಂಬದ ಬಗ್ಗೆ ಮಾಹಿತಿ ಪಡೆದ್ರು.
ನಾನು ಹೆಲಿಕಾಪ್ಟರ್ ಮಾಡಿಕೊಂಡು ಬರಬೇಕು ಅನಕೊಂಡ್ವಿ ಆಗಲಿಲ್ಲಾ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪಾ ಆಚಾರ ಅವರು ಕೊಪ್ಪಳ ಜಿಲ್ಲೆಯಲ್ಲಿ ಇದ್ದರು, ಹೀಗಾಗಿ ಅವರಿಗೆ ಹೇಳಿದ್ವಿ ಅವರು ಬಂದ್ರು ಎಂದು, ಕಣವಿ ಅಜ್ಜನವರ ಒಡನಾಟವನ್ನು ತಿಳಿಸಿದ್ರು.

ಕಣವಿ ಅಜ್ಜನವರ ಹಿರಿಯ ಮಗ ಮಾತನಾಡಿ, ನಮಗೆ ನಮ್ಮ ತಂದೆ ಯಾರೇ ಏನೆ ಕೊಟ್ಟರೂ ವಾಪಸ್ ಕೊಡು ಎಂದು ಹೇಳತಾ ಇದ್ದರು. ಹೀಗಾಗಿ ಐಸಿಯೂಗೆ ಹೋಗುವ ಮೊದಲೇ ನಮಗೆಲ್ಲಾ ಹೇಳಿದ್ರು. ಹೀಗಾಗಿ ಸರ್ಕಾರ ಅವರ ಚಿಕೆತ್ಸೆ ಮಾಡಿರುವ ಖರ್ಚುನ್ನು ನಾವು ಮರಳಿ ತಿರುಗಿಸಬೇಕೆಂದು ಯೋಚಿಸಿದ್ದೇವೆ. ಈ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಜೋತೆಗೆ ಡಾ.ವಿರೇಂದ್ರ ಹೆಗ್ಗಡೆ ಅವರಿಗೆ ಹೇಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೋಸಾ ಕಲ್ಬುರ್ಗಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವುಕಾರ, ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ್​ ಇದ್ದರು.

Related Articles

Leave a Reply

Your email address will not be published. Required fields are marked *