ನಾಗಪ್ಪ ಗಾಣಿಗೇರ ವಿರುದ್ಧ ಜಸ್ಟ್ ಫಾರ್ಮಲಿಟಿಸ್ : ರಿವಾಲ್ವರ್ ನಾಟಕ್!
ಧಾರವಾಢ
ನಿನ್ನೆಯಷ್ಟೆ ಗರಗ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಿವಾಲ್ವರ್ ತೋರಿಸಿ ಅಟ್ಟಹಾಸ ಮೆರೆದಿದ್ದರ ಬಗ್ಗೆ ಕಾಟಾಚಾರಕ್ಕೆಂಬಂತೆ ದೂರು ದಾಖಲಿಸಿಕೊಂಡಿದ್ದಾರೆ ಗರಗ ಪೊಲಿಸರು.
ಹೌದು ಇದು ಯಾರೋ ಅವಿವೇಕಿ ಮಾಡಿದ ತಪ್ಪಲ್ಲ ಅನ್ನೋದು ಪೊಲಿಸ್ ಇಲಾಖೆಗೂ ಗೊತ್ತಿದೆ. ಬಿಜೆಪಿಯ ಶಾಸಕರು ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಈತ ಬಿಜೆಪಿ ಲೀಡರ್ ಅಂತೆ.
ಅದು 30/1/2022 ರ ಸಂಜೆ ಹೊತ್ತಲ್ಲಿ ತೆಗೂರಿನ ಹೈವೆ ಸಮೀಪದ ರೇಣುಕಾ ಹಾರ್ಡವೇರ್ ಅಂಗಡಿ ಎದುರು ನಡೆದ ಘಟನೆ ಗೆ ಸಂಬಂದಿಸಿದ ಹಾಗೆ.
ರಸ್ತೆ ಪಕ್ಕದಲ್ಲೇ ಎಗ್ಗರೈಸ್ ಡಬ್ಬಾ ಅಂಗಡಿ ಇರುತ್ತೆ. ಅದೆ ಊರಿನ ಮತ್ತೋಬ್ಬ ಎಗ್ಗರೈಸ್ ಅಂಗಡಿಯನ್ನ ಜಾಗ ಬಿಟ್ಟು ಬೇರೆಡೆ ಇಡು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತಾನಿದ್ದಲ್ಲೆ ಕರೆಸಿ ಕೊಂಡಿದ್ದ.
ಈತ ತನಗಲ್ಲದ ವಿಷಯಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೆ. ಬಿಜೆಪಿ ಲೀಡರ್ ಅನಿಸಿಕೊಂಡಿರೊ ನಾಗಪ್ಪ ಗಾಣಿಗೇರ. ನೇರವಾಗಿ ಬಂದವನೆ ಘಟನೆಗೆ ಸಂಭದಿಸಿದಂತೆ ಮಡಿವಾಳ ಎಂಬಾತನೊಂದಿಗೆ ವಾಗ್ವಾದಕ್ಕಿಳಿತಾನೆ. ಮೊದಲಿಗೆ ಮಡಿವಾಳ ನನಗೇನು ಗೊತ್ತಿಲ್ಲ ಆಯ್ತು ನಾಗಪ್ಪಣ್ಣ ಎಂದೆಲ್ಲಾ ಹೇಳೋದನ್ನ ಮೊಬೈಲ್ ರೆಕಾರ್ಡ್ ಆಗ್ತಿರುತ್ತೆ.
ಆದ್ರೆ ಮಡಿವಾಳನಿಗೆ ನೀನು ಮೊನ್ನೇ ಇದೆ ಎಗ್ಗರೈಸ್ ಅಂಗಡಿ ವಿಷಯಕ್ಕೆ ನನ್ನ ವಿರುದ್ಧ ಪೊಲಿಸ್ ಠಾಣೆಗೆ ಹೋಗಿದ್ದೆ.
ಆಗಲೇ ನಾಗಪ್ಪ ಹೇಳ್ತಾನೆ ನೀನು ಪೊಲಿಸ್ ಸ್ಟೇಷನ್, ಡಿಸಿ, ಎಸಿ,ತಹಸಿಲ್ದಾರ್ ಎಲ್ಲಾ ನನ್ನ ಅಂಡರ್ ನಲ್ಲಿದ್ದಾರೆ. ನನ್ಯಾರು! ಎನು! ಮಾಡ್ಕಳಕ್ಕ ಆಗಲ್ಲಾ ನಿಂದ ನಿ ಮಾಡ್ಕೋ ! ನಂದ್ ನಾ ಮಾಡ್ಕೊತೇನಿ !
ಎಂದೆಲ್ಲಾ ಆಬಾಜ್ ಹಾಕೋ ಈತ ಮಡಿವಾಳನ ಮೇಲೆ ರಿವಾಲ್ವರ್ ಚಲಾಯಿಸೋಕೆ ಟ್ರೈ ಮಾಡ್ತಾನೆ. ಆದ್ರೆ ಅಲ್ಲಿಯೇ ಇದ್ದ ನಾಗಪ್ಪನ ಸ್ನೇಹಿತ ಅದನ್ನ ತಡಿತಾನೆ.
ಒಂದು ವೇಳೆ ಅಂದು ಒಂದು ಬುಲೆಟ್ ಹಾರಿದ್ರು ಕೂಡ ಆಗಬಾರದ ಅನಾಹುತವೇ ಅಗುತ್ತಿತ್ತು! ಆದರೂ ಸಹ ದೂರು ದಾಖಲಿಸಲು ಗರಗ ಠಾಣೆಗೆ ಮೊರೆ ಹೋದ ಮಡಿವಾಳಿಯ ದೂರು ಸ್ವಿಕರಿಸಲು ಮುಂದಾಗಲಿಲ್ವಂತೆ.
ಆದ್ರೆ ತಾನೋಬ್ಬ ಆಡಳಿತ ಪಕ್ಷದ ಮುಖಂಡ ಎಂದೇಲ್ಲಾ ಬಡಾಯಿ ಕೊಚ್ಚಿಕೊಂಡು ತೀರುಗುವ ಈತ ಕ್ಷೇತ್ರದ ಶಾಸಕರ ಹೆಸರನ್ನು ಬಿಟ್ಟೀಲ್ಲ.
ಯಾವಾಗ ರಿವಾಲ್ವರ್ ಹಿಡಿದು ರಾಜಾರೋಷವಾಗಿ ಎದುರಿನ ವ್ಯಕ್ತಿಗೆ ಜೀವ ಬೆದರಿಕೆ ಇಡುವ ವಿಡಿಯೋ ಸಾಕಷ್ಟು ಚರ್ಚೆಗೆ ಬಂದದ್ದೆ ತಡ.ಈತ್ತ ನಾಗಪ್ಪ ಹಲ್ಲು ಕಿತ್ತ ಹಾವಿನಂತೆ ಭೂಸುಗಟ್ಟಿದ್ದಾನೆ. ಆದ್ರೆ ಗರಗ ಗ್ರಾಮಿಷ ಠಾಣೆ ಯ ಪೊಲಿಸರು ಸರಿಯಾದ ಕಾನೂನು ಕ್ರಮ ಜರುಗಿಸಿ ವಿಚಾರಣೆ ನಡೆಸಿದ್ದರೆ.
ಸಂಭಂದಪಟ್ಟ ಠಾಣೆಯ ಗೌರವ ಉಳಿಯುತ್ತಿತ್ತು. ಆ ಕೆಲಸ ಮಾಡದೆ ಘಟನೆ ನಡೆದ ಎರಡ್ಮೂರು ದಿನಗಳ ನಂತರ ಸುದ್ದಿ ಪವರ್ ಸಿಟಿ ನ್ಯೂಸ್ ಲ್ಲಿ ಪ್ರಕಟ ಗೊಂಡಿತ್ತು.
ಆಗಲೆ ಕಾಟಾಚಾರಕ್ಕೆಂಬಂತೆ IPC(u)504,506, ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಹಾಗಾದ್ರೆ ರಿವಾಲ್ವರ್ ಪರವಾನಿಗೆ ಇದ್ದರು ಸಹ ಬಹಿರಂಗವಾಗಿ ರಿವಾಲ್ವರ್ ತೆಗೆದು ಶೂಟ್ ಮಾಡುವ ಬೆದರಿಕೆಯಿಂದ ಸಮಾಜದ ಮೇಲೆ ಬೀರಬಹುದಾದ ಪಾರಿಣಾಮ ಎಂತಹದು ಅಂತಾ ಪೊಲಿಸರಿಗೂ ಸಹ ಗೊತ್ತಿದೆ. ದಕ್ಷತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾಗಿರುವ ಎಸ್ ಪಿ ಪಿ. ಕೃಷ್ಣ ಕಾಂತ ಅವರು ರಿವಾಲ್ವರ್ ವಿಷಯದಲ್ಲಿ ಕಟ್ಟುನಿಟ್ಟಿನ ಕಾನೂ ಕ್ರಮ ಜರುಗಿಸ್ತಾರಾ ಅಥವಾ ದೂರು ದಾಖಲಿಸಿಕೊಂಡಿದ್ದಾರೆಂದು ನಿರ್ಲಕ್ಷ್ಯ ಮಾಡ್ತಾರಾ ಕಾದು ನೋಡೋನಾ..