ಮೆಣಸಿನಕಾಯಿ ಮಾರಲು ಬಂದ ನೂರಾರು ರೈತರಿಂದ : ದಿಢೀರ್ ರಸ್ತೆ ತಡೆ
ಹುಬ್ಬಳ್ಳಿ
ಮೆಣಸಿನಕಾಯಿ ಮಾರಾಟಕ್ಕೆ ಬಂದ ರೈತರು ಅಹೋರಾತ್ರಿ ರಸ್ತೆ ತಡೆ ನಡೆಸಿದ ಘಟನೆ ಹುಬ್ಬಳ್ಳಿಯ ಎಪಿಎಂಸಿ ಬಿ ಆರ್ ಟಿ ಎಸ್ ಕಾರಿಡಾರ್ ಬಳಿ ನಡೆದಿದೆ.
ಕೋವಿಡ್ ಹಿನ್ನಲೆಯಲ್ಲಿ ಹೊಟೆಲ್ ಗಳು ಬಂದ ಮಾಡಿಸಿದ್ದರಿಂದ ರೈತರು ಎಪಿ ಎಮ್ ಸಿ ಆಡಳಿತದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಪಿ ಎಮ್ ಸಿ ಹೊರಗಿನ ಹೋಟೆಲ್ ಗಳಲ್ಲಿ ಒಂದು ಊಟಕ್ಕೆ 200ರೂ. ದಿಂದ 250ರೂ. ವರೆಗೆ ಪಡೆಯುತ್ತಿರುವುದಕ್ಕೆ ಮತ್ತಷ್ಟು ಕಂಗಾಲಾಗಿದ್ದಾರೆ ರೈತರು.
ಹೌದು ಎಂದಿನಂತೆ ಇಂದು ಕೂಡ ಹುಬ್ಬಳ್ಳಿಯ ನವನಗರದ ಎಪಿ ಎಮ್ ಸಿ ಗೆ ವಿವಿಧ ಊರುಗಳಿಂದ ಮೆಣಸಿನಕಾಯಿ ಮಾರಾಟಕ್ಕೆ ಬಂದಿದ್ದ ರೈತರಿಗೆ ಎಪಿ ಎಮ್ ಸಿ ಯಲ್ಲಿರುವ ಕ್ಯಾಂಟಿನ್ ನಲ್ಲಿ ಉಪಹಾರ ಸಿಗದ ಕಾರಣ ಪರದಾಡುವಂತಾಗಿತ್ತು. ಆದರೆ ಕ್ಯಾಂಟಿನ್ ಮಾಲಿಕರು ಕೋವಿಡ್-19 ನಿಯಮಾವಳಿಗಳ ಪ್ರಕಾರ ರಾತ್ರಿ 9ಕ್ಕೆ ಬಂದ್ ಮಾಡಿದ್ದರು. ಇದರಿಂದ ಅಕ್ಕ ಪಕ್ಕದ ಪ್ರದೇಶದಲ್ಲೂ ರೈತನಿಗೆ ತಿನ್ನಲು ಎನು ಸಿಗದಂತಾಗಿದೆ.
ಇದರಿಂದ ರೈತರು ಧೀಢಿರ್ ರಸ್ತೆ ಗಿಳಿದು ಘಂಟೆ ಗಟ್ಟಲೆ ರಸ್ತೆ ತಡೆ ನಡಸಿದರು. ಆದರೆ ಕೆಲಸ ಮುಗಿಸಿ ಮನೆಗೆ ತೆರಳುವ ಭರದಲ್ಲಿದ್ದ ಸಾರ್ವಜನಿಕರಿಗೆ ರೈತರ ರಸ್ತೆ ತಡೆ ಇನ್ನಿಲ್ಲದ ಕಿರಿ ಕಿರಿ ಉಂಟು ಮಾಡಿತ್ತು. ಇದರಿಂದ ಸಾರ್ವಜನಿಕರು ಮತ್ತು ರೈತರ ನಡುವೆ ವಾಗ್ವಾದವು ನಡೆಯಿತು. ರಾತ್ರಿ ವೇಳೆಯಲ್ಲಿ ಆಗಮಿಸುವ ರೈತರು ಒಂದು ರಾತ್ರಿ ಹಗಲು ಅಲ್ಲಿಯೆ ಉಳಿಯ ಬೆಕಾಗುತ್ತದೆ. ಹೀಗಿರುವಾಗ ರೈತನ ಜೇಬಿಗೆ ಮತ್ತಷ್ಟು ಕತ್ತರಿ ಬಿಳುತ್ತದೆ. ಇದರಿಂದ ರೈತರ ಮಾನಸಿಕತೆ ಮತ್ತಷ್ಟು ಒತ್ತಡಕ್ಕೆ ಸಿಲುಕುತ್ತದೆ.
ಘಟನೆಯ ಮಾಹಿತಿ ಅರಿತ ಪೊಲಿಸರು ತಾಸಿನ ನಂತರವೆ ಸ್ಥಳಕ್ಕಾಗಮಿಸಿ ರೈತರ ಸಮಸ್ಯಗೆ ಪರಿಹಾರ ಹುಡುಕಿದ್ದಾರಂತೆ.