ಬೀದರ್ ಜಿಲ್ಲೆಯಲ್ಲಿ ಶಾಲೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ
ಬೀದರ್
ಗಡಿ ಜಿಲ್ಲೆ ಬೀದರನಲ್ಲಿ ಕೊರೊನಾ ಆರ್ಭಟ ಶಾಲೆ ಮಕ್ಕಳಲ್ಲಿ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ 600 ಗಡಿ ದಾಟಿದೆ.
ಜಿಲ್ಲಾಡಳಿತ ಹೇಗೆ ಕೊರೋನಾ ಹತೋಟಿಗೆ ತರಬಹುದು ಎಂಬುದು ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ…..
ಜಿಲ್ಲೆಯ ಹುಮನಬಾದನಲ್ಲಿ ಕೊರೊನಾ ಮಹಾಸ್ಪೋಟ ಗೊಂಡಿದೆ.
ಶಾಲೆ ಮಕ್ಕಳಿಗೆ ಕೊರೊನಾ ಬಂದ ಕಾರಣ, ವಿದ್ಯಾರ್ಥಿಗಳ ಪಾಲಕರಲ್ಲಿ ಭಯ ಹುಟ್ಟಿದೆ ನಮ್ಮ ಮಕ್ಕಳ ಬೇಗನೆ ಗುಣಮುಖರಾಗಲಿ ಎನ್ನುತ್ತಾರೆ ಪಾಲಕರು……..
ದಿಢೀರ್ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ
ಭೇಟಿ ನೀಡಿ, ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ರು.
ಹುಮನಾಬಾದ್ ಪಟ್ಟಣದ ಕಿತ್ತೂರುರಾಣಿ ಚೆನ್ನಮ್ಮ ವಿದ್ಯಾರ್ಥಿ ವಸತಿ ನಿಲಯದ 21ವಿದ್ಯಾರ್ಥಿನಿಯರಿಗೆ ಕೋವಿಡ್ ಧೃಡಪಟ್ಟ ಹಿನ್ನೆಲೆಯಲ್ಲಿ ಶಾಸಕ ರಾಜಶೇಖರ ಬಿ.ಪಾಟೀಲ
ಭೇಟಿ ನೀಡಿ, ಪರಿಶೀಲಿಸಿದರು.
ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿನಿಯರಿಗೆ ಪೌಷ್ಠಿಕ ಆಹಾರ ವ್ಯವಸ್ಥೆ ಮಾಡುವುದರ ಜತೆಗೆ ಕೋವಿಡ್ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ
ತಹಶೀಲ್ದಾರ್ ಡಾ. ಪ್ರದೀಪ ಹಿರೇಮಠ, ಕೋವಿಡ್ ನೋಡಲ್ ಅಧಿಕಾರಿ ಡಾ.ಗೋವಿಂದ, ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ, ಪುರಸಭೆ ಸದಸ್ಯ ಅಫರಸಮಿಯ್ಯ ಮತ್ತಿತರರು ಇದ್ದರು………
ವರದಿ:-ಮಹೇಶ ಸಜ್ಜನ ಬೀದರ