ಧಾರವಾಡ

ಧಾರವಾಡ ನಗದಲ್ಲಿ ಸರಗಳ್ಳತನ ಮಾಡುತ್ತಿದ್ದವರ ಬಂಧನ

ಧಾರವಾಡ

ಇತ್ತೀಚಿಗೆ ಧಾರವಾಡ ನಗರದಲ್ಲಿ ಸರಣಿ ಸರಗಳ್ಳತನ ನಡೆದು ಸಾರ್ವಜನಿಕರು ಆತಂಕಕ್ಕೆ ಈಡಾಗಿದ್ದರು.

ಹೊಸಯಲ್ಲಾಪೂರ, ಶ್ರೀನಗರ, ಸೈದಾಪೂರ ಏರಿಯಾಗಳು ಸೇರಿದಂತೆ‌ ಇತರೇಡೆ ಶಹರ ಠಾಣಾ ವ್ಯಾಪ್ತಿ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನದ ಪ್ರಕರಣಗಳು ನಡೆದಿದ್ದವು.

ಆರೋಪಿತರು ಬೈಕಗಳನ್ನು ಕದ್ದು ಹಾಡುಹಗಲೇ ಸರಗಳ್ಳತನ ಮಾಡುತ್ತಿದ್ದರು.

ಪ್ರಕರಣವನ್ನು ಗಂಭೀರವಾಗಿ‌ ಪರಿಗಣಿಸಿದ ಅವಳಿನಗರದ ಪೊಲೀಸ್ ಆಯುಕ್ತರಾದ ಲಾಬೂರಾಮ್, ಉಪ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಧಾರವಾಡದ ಎಸಿಪಿ ಅನುಷಾ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಇನ್ಸಪೇಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಉಪನಗರ ಠಾಣೆ ಸಿಪಿಐ ರಮೇಶ ಹೂಗಾರ ನೇತೃತ್ವದಲ್ಲಿ ತಂಡವನ್ನು ‌ರಚಿಸಿ ಆರೋಪಿಗಳನ್ನು ಹಿಡಿದಿದ್ದಾರೆ.

ಧಾರವಾಡದ Town inspector ಸಂಗಮೇಶ್ ದಿಡಗನಾಳ ಅವರು ಕೂಡ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಕರಣದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಇಲ್ಲಿವೆ.

ಮಹಾರಾಷ್ಟ್ರ ಮೂಲದ ಆರೋಪಿ ಸಾಹಿಲ್ ಜಾಫರಿ (27) ಅರೆಸ್ಟ್ ಆಗಿದ್ದು , ಈತ ಆಂಧ್ರಪ್ರದೇಶದ ಗುಂತಕಲ್ ನಲ್ಲಿ ವಾಸವಾಗಿದ್ದಾನೆ. ಈತನೊಂದಿಗೆ ಸಾತ್ ಕೊಟ್ಟಿರುವ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 140 ಗ್ರಾಂ ಚಿನ್ನಾಭರಣ, 2 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹೊಸ ವರ್ಷದ ಆರಂಭದಲ್ಲಿ ಅವಳಿನಗರದ ಪೊಲೀಸರು ಸಾರ್ವಜನಿಕರಿಗೆ ನೆಮ್ಮದಿ ತರುವಂತಹ ಕೆಲಸ ಮಾಡಿ ತೋರಿಸಿದಕ್ಕೆ ಪೇಢಾ ನಗರಿ ಮಂದಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *