ಸಾಧನೆಯ ಹಾದಿ ತಲುಪಿದ ಪೊಲೀಸ್ ಅಧಿಕಾರಿ ಚೆನ್ನಣ್ಣವರ್
ಧಾರವಾಡ
ಮುರುಗೇಶ ಚೆನ್ನಣ್ಣವರ್ ಈ ಹೆಸರು ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಬರೆದಿಡುವ ಸಾಧನೆ ಸಾಲಿನಲ್ಲಿ ಸೇರಿದಂತೆ ಆಗಿದೆ.
ಇದಕ್ಕೆ ಕಾರಣ ದೇಶದಲ್ಲಿಯೇ ಮೊದಲ ಬಾರಿಗೆ ಡ್ರಗ್ಸ ಕುರಿತು ದೇಶಾದ್ಯಂತ ಯುವ ಜನತೆಯಲ್ಲಿ ಸೈಕಲ್ ಜಾಗೃತಿ ಮೂಡಿಸಿದ ಕೀರ್ತಿ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಗೆ ಸಲ್ಲುತ್ತಿದೆ.
ಸಾಧನೆ ಮಾಡಿದ ಬಳಿಕ ತನ್ನ ತಾಯಿಗೆ ನಮಸ್ಕರಿಸಿ ಮುರುಗೇಶ ಚೆನ್ನಣ್ಣವರ್ ಆರ್ಶಿವಾದ ಪಡೆದ್ರು.
ಅವರೇ ನಮ್ಮ ಗಂಡು ಮೆಟ್ಟಿದ ನಾಡಿನ ಹುಬ್ಬಳ್ಳಿಯ ಹೆಸ್ಕಾ ಇನ್ಸಪೇಕ್ಟರ್ ಮುರುಗೇಶ ಚೆನ್ನಣ್ಣವರ್.
ಈಗಾಗಲೇ ಐರನ್ಮ್ಯಾನ್ ಅಂತಾ ಬಿರುದು ಪಡೆದಿರುವ ಇವರು ಕೆವಲ 18 ದಿನಗಳಲ್ಲಿ ಕಾಶ್ಮೀರದ ವೈಷ್ಣೋದೇವಿ ಮಂದಿರದಿಂದ ಸೈಕಲ್ ಜಾಗೃತಿ ಆರಂಭಿಸಿ, ಕನ್ಯಾಕುಮಾರಿಗೆ ತಲುಪಿ ಜಾಗೃತಿ ಅಂತ್ಯಗೊಳಿಸಿದ್ದಾರೆ.
ಇವರಿಗೆ ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಸಿನಿಯರ್ ಮ್ಯಾನೇಜರ್ ಆಗಿರುವ ಪ್ರಶಾಂತ ಹಿಪ್ಪರಗಿ ಸಾಥ್ ಕೊಟ್ಟಿದ್ದಾರೆ. ಪ್ರಶಾಂತ್ ಹಿಪ್ಪರಗಿ ಕೂಡ __(hawk man ) ಐರನ್ ಮ್ಯಾನ್ ಆಗಿ ಪ್ರಶಸ್ತಿ ಪಡೆದವರಾಗಿದ್ದಾರೆ.
ಪೆಟ್ರೋಲ್ ಬಂಕ್ ಹಾಗೂ ದಾಭಾಗಳಲ್ಲಿ ವಾಸ್ತವ್ಯ ಮಾಡಿ ದಿನಕ್ಕೆ 200 km ಕ್ಕಿಂತ ಹೆಚ್ಚಿಗೆ ಸೈಕಲ್ ಹೊಡೆದು ಯುವ ಜನತೆಯಲ್ಲಿ ಡ್ರಗ್ಸ ಕುರಿತು ಜಾಗೃತಿ ಸಂದೇಶ ತಿಳಿಸಿದ್ದಾರೆ.
ನೀಜಕ್ಕೂ ಚೆನ್ನಣ್ಣವರ್ ಪೊಲೀಸ್ ಅಧಿಕಾರಿಯಾಗಿ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.
ಅಪ್ಪಟ ಪುನೀತ ರಾಜಕುಮಾರ ಅಭಿಮಾನಿಯಾಗಿರುವ ಮುರುಗೇಶ ಚೆನ್ನಣ್ಣವರ್ ಸದಾಕಾಲ ಅವರದೇ ನೆನಪಿನಲ್ಲಿ ಸೈಕಲ್ ಜಾಗೃತಿ ಮಾಡಿದ್ದು ಮಾತ್ರ ಪುನೀತ ಅಭಿಮಾನವನ್ನು ಎತ್ತಿ ತೊರಿಸುವಂತೆ ಆಗಿದೆ. ಇದಕ್ಕೆ ಉದಾಹರಣೆ
ಚೆನ್ನಣ್ಣವರ್ ಅವರು ಪುನೀತ್ ಮೇಲೆ ಇಟ್ಟಿದ್ದ ಪ್ರೀತಿ. ಅಭಿಮಾನದ ಈ ಫೋಟೊ ಡಿಪಿ ಆಗಿ ಇಟ್ಟಿರುವುದು.
ಖಾಕಿ ಪಡೆಯಲ್ಲಿಯೂ ಕ್ರೀಡಾ ಆಸಕ್ತ ಪೊಲೀಸರಿಗೆ ಅವಕಾಶ ಕೊಟ್ಟರೆ ಎನ್ನನಾದ್ರೂ ಸಾಧಿಸಿ ತೋರಿಸಬಹುದು ಎನ್ನುವುದನ್ನು ಮುರುಗೇಶ ಚೆನ್ನಣ್ಣವರ್ ಸಾಬೀತು ಮಾಡಿ ತೋರಿಸಿದ್ದಾರೆ. ಪವರ್ ಸಿಟಿ ನ್ಯೂಸ್ ಕನ್ನಡದಿಂದ ಸಾಹಸಿ ಕ್ರೀಡಾ ಸಾಧಕ ಮುರುಗೇಶ ಚೆನ್ನಣ್ಣವರ್ ಅವರಿಗೆ ಅಭಿನಂದನೆಗಳು…