ಕವಿವಿ ನಿವೃತ್ತ ಕುಲಪತಿ ಮೇಲೆ ತನಿಖೆಗೆ ರಾಜ್ಯಪಾಲರ ಆದೇಶ
ಧಾರವಾಡ
ರಾಜ್ಯದ ಇತಿಹಾಸದಲ್ಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಯೊಬ್ಬರು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿ ದೊಡ್ಡ ಸುದ್ದಿಯಾಗಿದ್ದರು.
ಈ ಪ್ರಕರಣದಲ್ಲಿ ಅಂದಿನ ಕುಲಪತಿಗಳು ಆಗಿದ್ದ ಎಚ್.ಬಿ.ವಾಲೀಕಾರ ಅವರು ಸುದೀರ್ಘ ಕಾನೂನು ಹೋರಾಟದ ಮೂಲಕ ನಿರಾಳವಾಗಿದ್ದರು.
ಈಗ ಮತ್ತೆ ಅವರಿಗೆ ಸಂಕಷ್ಟ ಎದುರಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಆವರಣದಲ್ಲಿ ಸೌರ ವಿದ್ಯುತ್ ಘಟಕ ಅಳವಡಿಕೆ ಯೋಜನೆಯನ್ನು ಇತರೆ ಹಲವಾರು ಕಾಮಗಾರಿಗಳೊಂದಿಗೆ 2014 ರಲ್ಲಿ ಕೈಗೊಳ್ಳಲಾಗಿದ್ದು, ಈ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರು ಆದೇಶ ಮಾಡಿದ್ದಾರೆ.
ಈ ಕುರಿತು,30-12-2020, ರಂದು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು, ಭ್ರಷ್ಟಾಚಾರ ನಿಯಂತ್ರಣ ವಿಭಾಗ( Anti-Corruption Bureao),,ಬೆಳಗಾವಿ, ರವರಲ್ಲಿ ಶ್ರೀ. ಈರೇಶ ಅಂಚಟಗೇರಿ ಯವರು ಜಂಟಿಯಾಗಿ ದೂರೊಂದನ್ನು ದಾಖಲಿಸಿದ್ದರು.
ಈ ಬಗ್ಗೆ ಗೌರವಾನ್ವಿತ ಕರ್ನಾಟಕ ರಾಜ್ಯಪಾಲರಲ್ಲಿ ಸೂಕ್ತ ಆದೇಶಕ್ಕಾಗಿ ಮನವಿಯನ್ನು ಸಲ್ಲಿಸಲಾಗಿತ್ತು.
ಇವರ ಮನವಿಯನ್ನು ಮನ್ನಿಸಿ ಗೌರವಾನ್ವಿತ ಕರ್ನಾಟಕ ರಾಜ್ಯಪಾಲರು 23-11-2021, ರಂದು ಮಾನ್ಯ ರಾಜಭವನ ಕಛೇರಿಯ ನಡವಳಿಯಂತೆ ಮತ್ತು ಭ್ರಷ್ಟಾಚಾರ ನಿಯಂತ್ರಣ 1988 ರ ಸೆಕ್ಷನ್ 17- A , 5 ನೇ ಕಲಂ ರ ಅಧಿಕಾರದ ಅಡಿಯಲ್ಲಿ , ಶ್ರೀ. H . B .ವಾಲೀಕಾರ ,ನಿವೃತ್ತ ಕುಲಪತಿಗಳು ,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ , ಇವರ , ವಿರುದ್ದ ಸೂಕ್ತ ತನಿಖೆಯನ್ನು ನಡೆಸಲು ಅನುಮತಿ ಕೊಟ್ಟಿದ್ದಾರೆ.