ಆರೋಗ್ಯಧಾರವಾಡಸ್ಥಳೀಯ ಸುದ್ದಿ
ಧಾರವಾಡದಲ್ಲಿ ಪತ್ತೆಯಾದ ಓಮಿಕ್ರಾನ್ ವೈರಸ್ : ಜಿಲ್ಲಾಡಳಿತದ ಮುಂದಿನ ಕ್ರಮವೇನು?
ಧಾರವಾಡ
ಜಿಲ್ಲೆಯಲ್ಲಿ ಓಮಿಕ್ರಾನ್ ಸೊಂಕು ಪತ್ತೆ ಯಾಗಿದ್ದು .ಈ ಮೂಲಕ ಅವಳಿನಗರಕ್ಕೂ ಓಮಿಕ್ರಾನ್ ವೈರಸ್ ಪಾದಾರ್ಪಣೆ ಮಾಡಿದಂತಾಗಿದೆ.
ನಗರದ 54 ವರ್ಷದ ಮಹೀಳೆಯ ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್ ಟೆಸ್ಟ್ ವರದಿ ಬಂದಿದೆ. ಮಹೀಳೆ ಗೆ ಓಮಿಕ್ರಾನ್ ಸೊಂಕು ಧೃಡ ಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ ಹೇಳಿದ್ದಾರೆ
ಆದರೆ ಜಿಲ್ಲಾಡಳಿತಕ್ಕೆ ಈವರೆಗೂ ಮಹೀಳೆಯ ಯಾವುದೇ ಪ್ರಯಾಣದ ದಿನಚರಿ ಲಭ್ಯವಾಗಿಲ್ಲ.
ಜಿಲ್ಲೆಗೆ ಆಗಮಿಸಿರುವ 12 ಹೊರ ದೇಶಗಳಿಂದ ಸುಮಾರು 200 ಪ್ರಯಾಣಿಕರು ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು ನಿಟ್ಟುಸಿರು ಬಿಟ್ಟಂತಾಗಿದೆ.
ಧಾರವಾಡದ ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಮಹಿಳೆಯನ್ನು
ಡಿಸೆಂಬರ್ 5 ರಂದು ತಪಾಸಣೆ ಗೊಳಪಡಿಸಲಾಗಿತ್ತು. ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯ ಸಂಪರ್ಕ ದಲ್ಲಿದ್ದ ಕೆಲವರಲ್ಲಿ
ಈಗಾಗಲೇ 2 ವರದಿಗಳು ನೆಗೆಟಿವ್ ಬಂದಿವೆ.
ಪ್ರಾಥಮಿಕ ಹಾಗೂ ದ್ವೀತಿಯ ಹಂತದ ಸಂಪರ್ಕ ಇರುವರರ ವರದಿಯೂ ಸಹ ನೆಗೆಟಿವ್ ಬಂದಿದೆ.