ಪಡಿತರ ಅಕ್ಕಿ ಕಾಳ ಸಂತೆಗೆ ಸಾಗಾಟ : ಒರ್ವನ ಬಂಧನ
ಬಿದರ್: ಅನ್ನಭಾಗ್ಯ ಯೊಜನೆಯಡಿ ವಿತರಣೆ ಮಾಡಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ನಗರದ ಲಾಡಗೇರಿ ಬಳಿ ಪೊಲಿಸರು ತಪಾಸಣೆ ನಡೆಸಿದಾಗ ಒಟ್ಟು 20,400ರೂ.ಮೌಲ್ಯದ 50 ಕೆಜಿಯ 18 ಅಕ್ಕಿ ಪ್ಯಾಕೇಟಗಳು ಮತ್ತು 50 ಕೆಜಿಯ 2 ಪ್ಯಾಕೆಟ್ ಗೋಧಿ ಸೇರಿದಂತೆ ಒಟ್ಟು 10 ಕ್ವಿಂಟಾಲ್ ಗೂ ಹೆಚ್ಚು ಪಡಿತರ ಅಕ್ಕಿ ಮತ್ತು ಗೋಧಿ ಜಪ್ತಿ ಮಾಡಿರುವ ಪೊಲಿಸರು ಘಟನೆಗೆ ಸಂಬಂದಿಸಿದಂತೆ ಒರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದಕ್ಕೂ ಮೊದಲು ಸ್ಥಳೀಯ ದಲಿತಪರ ಸಂಘಟನೆ ಮತ್ತು ಕನ್ನಡಪರ ಸಂಘಟನೆಯವರು ವಶಕ್ಕೆ ಪಡೆದಿರುವ ಅಕ್ಕಿಯನ್ನು ವ್ಯವಸ್ಥಿತವಾಗಿ ಕಾಳ ಸಂತೆಗೆ ಮಾರುವುದನ್ನು ಕಾಯಕ ಮಾಡಿ ಕೊಂಡಿರುವ ಸೂರ್ಯಕಾಂತ ಎನ್ನುವ ವ್ಯಕ್ತಿಯನ್ನು ಪೊಲಿಸರು ವಿಚಾರಣೆ ನಡೆಸಬೆಕೆಂದು ಜೈ ಭೀಮ್ ಸಂಘಟನೆಯ ರಾಹುಲ್ ಡಾಂಗೆ ಸೆರಿದಂತೆ ಪೊಲಿಸರನ್ನ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮೊದಲಿನಿಂದಲೂ ಬಡ ವರ್ಗದ ಜನರಿಗೆ ವಿತರಿಸುವ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಕಾಳ ಸಂತೆಯಲ್ಲಿ ಮಾರಲು ಬೀದರ್ ನಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುವ ವ್ಯವಸ್ಥಿತ ಜಾಲವೆ ಇದೆ ಎನ್ನ ಲಾಗುತ್ತಿದೆ.
ಇ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿ ಗಂಜ್ ಪೊಲೀಸ್ ಠಾಣೆಯ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.