ಗರಗದಲ್ಲಿ ಪಿಂಚಿ ಪರಿವರ್ತನಾ ಕಾರ್ಯಕ್ರಮ.
ಧಾರವಾಡ
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನವೆಂಬರ್ 29 ಸೋಮವಾರ 2021 ನೇ ಸಾಲಿನ ಚಾತುರ್ಮಾಸದ ವರ್ಷ ಯೋಗದ ಪ್ರಯುಕ್ತ ಬೃಹತ್ ಸಿದ್ಧಚಕ್ರ ಆರಾಧನ, ಮುಂಜಿ ಬಂಧನ, ಜ್ಞಾನೇಶ್ವರ ಜೈನ ಅಲ್ಪಸಂಖ್ಯಾತರ ಕೋ-ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನೆ, 108 ಭಕ್ತಿ ಆರತಿ ಕಿರುಹೊತ್ತಿಗೆ ಹಾಗೂ ಸಂಕ್ಷಿಪ್ತ ಪೂಜಾ ಪುಷ್ಪಾಂಜಲಿ ಜ್ಞಾನದೀಪ ಶಾಸ್ತ್ರಗಳ ಬಿಡುಗಡೆ, ಪಿಂಚಿ ಪರಿವರ್ತನಾ ಕಾರ್ಯಕ್ರಮ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.
ಆಚಾರ್ಯ ರತ್ನ 108 ಬಾಹುಬಲಿ ಮಹಾರಾಜರ ಶಿಷ್ಯರಾದ ಸಮ್ಯಕ್ತ್ವ ಶಿರೋಮಣಿ ಆಚಾರ್ಯ 108 ಜ್ಞಾನೇಶ್ವರ ಮುನಿ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು,
ಮುನಿ ಮಹಾರಾಜರು ತಮ್ಮ ಆಶೀರ್ವಚನದಲ್ಲಿ ಮಕ್ಕಳಿಗೆ ಧರ್ಮ ಸಂಸ್ಕಾರ ಅತ್ಯಂತ ಮುಖ್ಯ ಮಕ್ಕಳಿಗೆ ವಿದ್ಯೆಯ ಜೊತೆಗೆ ಧರ್ಮ ಸಂಸ್ಕಾರವನ್ನು ಅವಶ್ಯವಾಗಿ ನೀಡಬೇಕು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಮುನಿ ಮಹಾರಾಜರಿಗೆ ಗರಗ ಗ್ರಾಮದ ಸಮಸ್ತ ಜೈನ ಸಮಾಜ ಹಾಗೂ ಸಮಸ್ತ ಕರ್ನಾಟಕ ದಿಗಂಬರ ಜೈನ ಸಮಾಜದ ವತಿಯಿಂದ ಚಾರಿತ್ಯ ಯೋಗಿ ಎಂಬ ಉಪಾಧಿಯನ್ನು ನೀಡಿ ಗೌರವಿಸಲಾಯಿತು. ಈ ಧರ್ಮ ಸಭೆಯಲ್ಲಿ ಗರಗ ಗ್ರಾಮದ ಸಮಸ್ತ ಸರ್ವಧರ್ಮ ಬಾಂಧವರು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಧರ್ಮ ಬಾಂಧವರು ಭಾಗವಹಿಸಿದ್ದರು.