ಡಾ.ಇಸಬೆಲ್ಲಾ ಝೇವಿಯರ್ ದಾಸ- ವಿದ್ಯಾವರ್ಧಕ ಸಂಘದ ಮಹಿಳಾ ಮೀಸಲಾತಿ ಸ್ಥಾನಕ್ಕೆ ಸ್ಫರ್ಧೆ
ಧಾರವಾಡ
ಕರ್ನಾಕಟ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ -_2021 ಕ್ಕೆ ಧಾರವಾಡ ಡಾ.ಇಸಬೆಲಾ ಝೇವಿಯರ್ ದಾಸ ನಿಂತಿದ್ದಾರೆ.
ಮಹಿಳಾ ಮಿಸಲಾತಿ ಸ್ಥಾನಕ್ಕೆ ಅಭ್ಯರ್ಥಿ ಆಗಿರುವ ಇವರು, ಹೆಸರಾಂತ ಸಾಧನಾ ಸಂಸ್ಥೆಯ ಮೂಲಕ 30 ವರ್ಷಗಳಿಂದ ರಾಜ್ಯದಲ್ಲಿ ನೊಂದವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.
ರಾಜ್ಯದ 3 ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಆಡಳಿತ ಮಂಡಳಿಯ ಸದಸ್ಯಳಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ನಾಟಕ ಮಾಡಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ವಿದ್ಯಾವರ್ಧಕ ಸಂಘದಲ್ಲಿ ಚುನಾವಣೆಗೆ ಧುಮುಕಿದ್ದಾರೆ.
ದಕ್ಷಿಣ ಆಫ್ರೀಕಾದ ಅಂತರಾಷ್ಟ್ರೀಯ ಗ್ರೇಲ್ ಮಹಿಳಾ ವಿಶ್ವವಿದ್ಯಾಲಯದಿಂದ ಟಿ.ಎಫ್.ಟಿ. ಟ್ರೇನಿಂಗ್ ಫಾರ್ ಟ್ರಾನ್ಸಫಾರ್ಮೇಶನ್ ಇನ್ ಕಮ್ಯೂನಿಟಿ ಡೆವಲಪ್ಮೆಂಟ್ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಗೌರವ ಡಾಕ್ಟರೇಟ್ ಪದವಿಗೆ
ಏಷ್ಯಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
ಇನ್ನು ಡಾ.ಪಾಟೀಲ್ ಪುಟ್ಡಪ್ಪ ಅವರ ತಂಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇಂತಹ ಪ್ರತಿಭಾವಂತ ವಿದ್ಯಾವಂತೆಯನ್ನು ಸಾಮಾಜಿಕ ಸೇವಾ ಮತ್ತು ಹೋರಾಟದ ಸಮರ್ಪಣೆಗೆ ಜಾತಿ, ಮತ- ಪಂಥದ ಭೇದ ಮರೆತು ಕನ್ನಡ ಸೇವೆಗೆ ಆರ್ಶಿವದಿಸಿ ಎಂದು ಮತದಾರರಲ್ಲಿ ಪ್ರಾರ್ಥಿಸಿ, ವಿನಂತಿ ಮಾಡಿಕೊಂಡಿದ್ದಾರೆ ಡಾ. ಇಸಬೆಲ್ಲಾ ಝೇವಿಯರ್ ದಾಸ