ಧಾರವಾಡ

ಖೋಟಾ ನೋಟು ಜಾಲ ಪುಲ್ active

ಧಾರವಾಡ

ಜಿಲ್ಲೆಯಲ್ಲಿ ಬಹಳ ದಿನಗಳಿಂದ ವ್ಯವಸ್ಥಿತವಾಗಿ ನಡೆಸುಕೊಂಡು ಬಂದಿದ್ದ ಖೋಟಾ ನೋಟು ಜಾಲವನ್ನು ಧಾರವಾಡ ಪೊಲೀಸರು ಪತ್ತೆಹಚ್ಚಿದ್ದಾರೆ.

ಧಾರವಾಡ ಉಪನಗರ ಪೊಲೀಸರು ಈ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಈಗಾಗಲೇ ಒಟ್ಟು 4 ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದಂತೆ 5 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಜಾಲ ಪತ್ತೆಯಾಗಿದ್ದು ಇಂಟರೆಸ್ಟಿಂಗ್*

ಕೆಲಗೇರಿ ಬ್ರೀಡ್ಜ್ ಹತ್ತಿರ ಬೈಕನಲ್ಲಿ ನಿಂತುಕೊಂಡು ಮಾತನಾಡುತ್ತಿದ್ದ 3 ಮಂದಿ ಯುವಕರ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಬಂದಾಗ, 3 ಮಂದಿ ಬೈಕ್ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾರೆ. ಬೆನ್ನತ್ತಿ ಹಿಡಿದ ಪೊಲೀಸರು ಒಬ್ಬನನ್ನ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಖೋಟಾ ನೋಟು ಜಾಲದ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಅರೆಸ್ಟ ಆದವರು
ಮುಗದ ಗ್ರಾಮದ ಸಂತೋಷ ಭೋವಿ, ರವಿ ಔರಾದಿ, ಪ್ರಜ್ವಲ್ ಭೋವಿ, ಮಂಜುನಾಥ ಬಳಿಗಾರ ನನ್ನು ಪೊಲೀಸರು ಬಂಧಿಸಿದ್ದಾರೆ.
ಇವರೆಲ್ಲಾ 500 ನೋಟನ್ನು ಚಲಾವಣೆ ಮಾಡುತ್ತಿದ್ದರು.

ಒಟ್ಟು 35 ಖೊಟಾನೋಟುಗಳು ಸಿಕ್ಕಿದ್ದು, ದೀಪಾವಳಿ ನಂತರ ಈ‌ ಖೋಟಾ ನೋಟು ಗ್ಯಾಂಗ್ ಪುಲ್ ಆ್ಯಕ್ಟಿವ್ ಆಗಿ ಕೆಲಸ ಮಾಡಿದೆ.

ಘಟನೆ ಸಂಬಂಧ ಪೊಲೀಸರು ಎಪ್ಸಾನ್ xerox ಮಶೀನ್ ಹಾಗೂ ಸ್ಕ್ಯಾನರ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ..

**ಖೋಟಾ ನೋಟು ಪತ್ತೆ ಹಚ್ಚುವುದು ಹೀಗೆ ನೋಡಿ**

ಈ ಕೆಳಗಿನ ಫೋಟೊಗಳನ್ನು ಗಮನಿಸಿ ಅಸಲಿ ನೋಟು ಯಾವುದು ನಕಲಿ‌ ನೋಟು ಯಾವುದು. ಎನ್ನುವುದು ಗೊತ್ತಾಗುತ್ತೆ.

ನೀವು ಮೋಸ ಹೋಗುವ ಮೊದಲು ಜಾಗೃತರಾಗಿರಿ ಎನ್ನುವುದು ಪವರ್ ಸಿಟಿ ನ್ಯೂಸ ‌ಕನ್ನಡದ ಓದುಗರಲ್ಲಿ ಮನವಿ…

Related Articles

Leave a Reply

Your email address will not be published. Required fields are marked *