ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಜನಸ್ನೇಹಿ ಜಿಲ್ಲಾಧಿಕಾರಿಯಾದ ಧಾರಾವಾಡ ಡಿಸಿ ನಿತೇಶ ಪಾಟೀಲ್
ಧಾರವಾಡ
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಮನಸೂರಿನಲ್ಲಿ ಬೀದಿಗೆ ಬಿದ್ದ ರೈತನ ಕುಟುಂಬ ಎಂದು ಕೆಲವೇ ಗಂಟೆಗಳ ಹಿಂದೆಯಷ್ಟೇ ಸುದ್ದಿ ಪ್ರಸಾರ ಮಾಡಲಾಗಿತ್ತು.
ಮನಸೂರು ಗ್ರಾಮದ ಕರೆಪ್ಪ ಅರಳಿಕಟ್ಟಿ ಕುಟುಂಬ ಅಕಾಲಿಕ ಮಳೆಗೆ ಬೆಳೆ ಹಾನಿ ಹಾಗೂ ಮನೆ ಬಿದ್ದು ಬೀದಿಯಲ್ಲಿ ಜೀವನ ನಡೆಸುವಂತಹ ಸ್ಥಿತಿ ಆಗಿತ್ತು.
ಈ ಸುದ್ದಿಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ಗಮನಕ್ಕೂ ತರಲಾಗಿತ್ತು.
ತಕ್ಷಣ ಮನಸೂರಿನ (va) ತಲಾಟಿ ಅಲ್ಲಾಭಕ್ಷ ಪಿಂಜಾರ್ ನಿಗೆ ಮಾಹಿತಿ ಕೇಳಿದ ಜಿಲ್ಲಾಧಿಕಾರಿಗಳು ಏನು ಆಗಿದೆ ಪರಿಸ್ಥಿತಿ ಮತ್ತು ನಿವೇನು ಕ್ರಮ ಕೈಗೊಂಡಿದ್ರಿ ಎಂದು ಕೇಳಿದ್ರು.
ಈ ವಿಷಯವಾಗಿ ಜಿಲ್ಲಾಧಿಕಾರಿಗೆ ತಿಳಿಸಿರುವ ತಲಾಟಿ ನವೆಂಬರ್ 17 ಕ್ಕೆ ಮನೆ ಬಿದ್ದಿದೆ. 18 ಕ್ಕೆ ಭೇಟಿ ಕೊಟ್ಟು ಮೇಲಾಧಿಕರಿಗಳಿಗೆ ವರದಿ ಕೊಡಲಾಗಿದೆ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಪವರ್ ಸಿಟಿ ನ್ಯೂಸ್ ಕನ್ನಡಕ್ಕೆ ಮಾಹಿತಿ ಕೊಟ್ಟಿದ್ದು, ನವೆಂಬರ್ 30 ರೊಳಗೆ ಮನೆ ಬಿದ್ದು, ಬೆಳೆ ಹಾನಿಯಾಗಿ ಕಂಗಾಲಾಗಿರುವ ಕುಟುಂಬಕ್ಕೆ ಪರಿಹಾರ ಕೊಡಲಾಗುವುದು ಎಂದಿದ್ದಾರೆ.
ಜನಸ್ನೇಹಿ ಜಿಲ್ಲಾಧಿಕಾರಿ ಆಗಿ ಸಮಸ್ಯೆಗೆ ಸ್ಪಂದಿಸಿದಕ್ಕೆ ನೊಂದಿರುವ ಬಡ ಕುಟುಂಬದ ಹಾರೈಕೆಗಳು ಸದಾಕಾಲ ಜಿಲ್ಲಾಧಿಕಾರಿ ಜೋತೆಗೆ ಇದ್ದೆ ಇರುತ್ತೆ.